ಗದಗ : ಈ ಕೃಷಿಯಲ್ಲಿ ಖುಷಿ ಇದೆ. ಹೊಸ ಅನುಭವ, ಹೊಸ ಆದಾಯ, ಜೊತೆಗೆ ನಮ್ಮ ಭೂಮಿಯಲ್ಲಿ ನಾವು ಆಳಾಗಿ ದುಡಿದು ಅರಸನಾಗಿ ಮೆರೆಯುವ ಬಂಗಾರದಂತಹ ಸಮಯವಿದೆ. ಹೀಗಾಗಿ ಈ ಕೃಷಿ ಕ್ಷೇತ್ರ ಅಗತ್ಯ ಮೂಲ ಸೌಕರ್ಯ ಸಿಕ್ಕರೆ ಸಾಕು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದೆ.
ಅಂತಹ ಮುಂಚೂಣಿ ಕೃಷಿ ಮಾಡಿ ಎಲ್ಲರಿಗಿಂತ ಭಿನ್ನವಾಗಿ ಕೃಷಿಯಲ್ಲಿ ಗುರುತಿಸಿಕೊಂಡವರೇ ಗದಗ ಜಿಲ್ಲೆಯ ಮದಗಾನೂರ ಗ್ರಾಮದ ವೆಂಕರೆಡ್ಡಿ ಗೋವಿಂದರೆಡ್ಡಿ ಮೂಲಿಮನಿ.
ಯಾವಾಗ ? ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ಯೋಜನೆ ಕೇಳಿದ್ರೋ, ಅಂದೇ ಎಲ್ಲರಂತೆ ತಾವು ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ತಮ್ಮ 5 ಎಕರೆ 18 ಗುಂಟೆ ಜಮೀನಿನಲ್ಲಿ 100/100 ಸುತ್ತಳತೆ ಕೃಷಿಹೊಂಡ ನಿರ್ಮಿಸಿಕೊಂಡು ಅತಿ ಉತ್ತಮ ಫಸಲನ್ನು ಬೆಳೆದು ಮಾದರಿಯಾಗಿದ್ದಾರೆ.
ಅದರಲ್ಲಿ ಈ ಭಾರಿ ಅತಿವೃಷ್ಟಿಗೆ ಸಿಲುಕಿದರು ಕೊಂಚ ಲಾಭದ ಕಳೆ ಮೂಡಿಸಿದ ಹೆಸರು ವಾಣಿಜ್ಯ ಬೆಳೆ ಮೆಣಸಿನಕಾಯಿ ಜೊತೆಗೆ ಹಿಂಗಾರು, ಗೋಧಿ, ಕಡಲೆ, ಹವೀಜ, ಬೆಳೆದು ತೋಟಗಾರಿಕೆ ಬೆಳೆಗಳಿಗೂ ಪ್ರಾಮುಖ್ಯತೆ ನೀಡಿದ್ದಾರೆ.
ಒಣ ಬೇಸಾಯದ ನೆಲದಲ್ಲಿ ಮಳೆ ಆಶ್ರಿತ ಬೇಸಾಯ ಮಾಡಿ 5 ಎಕರೆ ಹೊಲದಲ್ಲಿ 2 ಲಕ್ಷ ಆದಾಯ ಗಳಿಸುವುದೇ ಕಷ್ಟವಾದಾಗ ವೆಂಕರೆಡ್ಡಿ ಅವರು ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಾಣ ಮಾಡಿಕೊಂಡು ಈ ಬಾರಿ ಕನಿಷ್ಠ 3.50 ಲಕ್ಷ ಆದಾಯದ ವಿಶ್ವಾಸ ಹೊಂದಿದ್ದಾರೆ.
ಪಿಯುಸಿ ಶಿಕ್ಷಣ ಓದಿರುವ ವೆಂಕರೆಡ್ಡಿ ಮೂಲಿಮನಿ ತಮ್ಮ 52 ನೇ ವಯಸ್ಸಿನಲ್ಲೂ ಹೊಸ ಹೊಸ ಕೃಷಿ ಪ್ರಯೋಗ ಮಾಡುತ್ತಾ ಕಪ್ಪು ಮಣ್ಣಿನ ಕೃಷಿಯಲ್ಲಿ ಸ್ವರ್ಗ ಕಂಡು ದೇಶಪಾಂಡೆ ಫೌಂಡೇಶನ್ ಸಹಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
Kshetra Samachara
26/01/2022 07:14 pm