ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಹೊಸ ಕೃಷಿಯ ಖುಷಿ, ಮಣ್ಣಲ್ಲೇ ದೊರೆಯಾದ ಬಿಎಸ್ಸಿ ಪದವೀಧರ

ಗದಗ : ಇಲ್ಲೋಬ್ಬ ಬಿಎಸ್ಸಿ ಪದವೀಧರ ಕೃಷಿಕನಾಗಿದ್ದಾನೆ, ಕೃಷಿ ಭೂಮಿಯಲ್ಲಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಿಸಿಕೊಂಡು ತಾಜಾ ತಾಜಾ ಬೆಳೆ ಬೆಳೆದು ಇತರರಿಗೆ ಕೃಷಿಕ್ಷೇತ್ರವನ್ನೂ ಮಾದರಿಯಾನ್ನಾಗಿ ಮಾಡಿ ತೋರಿಸಿದ್ದಾರೆ.

ಸ್ವಾಮಿ ಗದಗ ಜಿಲ್ಲೆಯ ಮದಗಾನೂರ ಗ್ರಾಮದ ರೈತ ಮಂಜುನಾಥರೆಡ್ಡಿ ಮೂಲಿಮನಿ ಓದಿದ್ದು ಬಿಎಸ್ಸಿ ಆದ್ರೇ, ಬದುಕು ಅರಿಸಿದ್ದು ಮಾತ್ರ ಈ ಬೇಸಾಯದ ಬದುಕನ್ನು, ತಮ್ಮ 3 ಎಕರೆ 35 ಗುಂಟೆ ಹೊಲದಲ್ಲಿ ದುಡಿದು ಇದೀಗ ಹೊಸ ಆದಾಯದ ಖುಷಿಯಲ್ಲಿ ಹಾಯಾಗಿದ್ದಾರೆ.

ಮೊದಲೇ ಬಿಎಸ್ಸಿ ಪದವೀಧರನಾದ ಮಂಜುನಾಥರೆಡ್ಡಿ ಮೂಲಿಮನಿ ತಮ್ಮ ಜಮೀನಿನಲ್ಲಿ ಒಂದಲ್ಲಾ, ಎರಡಲ್ಲ ನಾನಾ ಮಾದರಿ ಬೆಳೆ ಬೆಳೆದಿದ್ದಾರೆ, ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ 100/100 ಕೃಷಿಹೊಂಡ ನಿರ್ಮಾಣ ಮಾಡಿಕೊಂಡು ಅದರಲ್ಲಿ ಪ್ರಮುಖವಾಗಿ ಚಿಕ್ಕು, ಪೇರಲ್, ಮಾವು, ಮಹಾಗನಿ, ಪಪ್ಪಾಯಿ, ಅಂಜುರ್, ತೇಂಗು, ತೆಂಗಿನಮರ ಜೊತೆ ಜೊತೆಗೆ ಮೆಣಸಿನಕಾಯಿ, ಹೆಸರು, ಈಗ ಕಡಲೆ, ಕುಸುಬೆ ಸಹ ಬೆಳೆದಿದ್ದಾರೆ.

ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಾಣ ಯೋಜನೆ ಮೂಲಕ ಎಲ್ಲಾ ಬೆಳೆಗಳಿಗೆ ಸ್ಪಿಂಕ್ಲರ್ ಕಾರಂಜಿ ಮೂಲಕ ನೀರು ಉಣಿಸುತ್ತ, ಉತ್ತಮ ಫಸಲನ್ನು ಬೆಳೆದಿದ್ದು, ಈ ಬಾರಿ ರೈತ ಮಂಜುನಾಥರೆಡ್ಡಿ ಮೂಲಿಮನಿ ಗರಿಷ್ಠ 5 ಲಕ್ಷ ಆದಾಯದ ವಿಶ್ವಾಸ ಹೊಂದಿದ್ದಾರೆ.

ಒಟ್ಟಾರೆ ತಾವು ಬಿಎಸ್ಸಿ ಶಿಕ್ಷಣ ಪಡೆದರೂ ಎಲ್ಲಿಯೂ ಉದ್ಯೋಗ ಅರಸದೇ ಮಣ್ಣಲ್ಲೇ ದೊರೆಯಾದ ಮಂಜುನಾಥರೆಡ್ಡಿ ಮೂಲಿಮನಿ ದೇಶಪಾಂಡೆ ಫೌಂಡೇಶನ್ ಸಹಕಾರಕ್ಕೆ ಧನ್ಯವಾದ ಎಂತಾರೇ.

Edited By : Manjunath H D
Kshetra Samachara

Kshetra Samachara

25/01/2022 10:58 pm

Cinque Terre

66.5 K

Cinque Terre

1

ಸಂಬಂಧಿತ ಸುದ್ದಿ