ಗದಗ: ಆಗಿನ ಕಾಲದ ಕೃಷಿ ಪದ್ಧತಿಯೇ ಹಾಗಿತ್ತು, ಮನುಷ್ಯೇ ಎಷ್ಟೇ ಓದಿದ್ದರೂ ಆತನಿಗೆ ಕೃಷಿಯೇ ಮುಖ್ಯವಾಗಿತ್ತು, ಅಂತಹ ಕೃಷಿಯಲ್ಲೇ ತಮ್ಮ ಬದುಕಿನ 60 ವಸಂತಗಳನ್ನು ಪೂರೈಸಿದ ಇಲ್ಲೋಬ್ಬ ಬಿಎ.ಎಲ್ಎಲ್,ಬಿ ಪದವೀಧರ ಇಂದಿಗೂ ಕೃಷಿ ಪ್ರೇಮಿ ಎಂದ್ರೇ ಅಬ್ಬಾ ! ಮಣ್ಣಿನ ದುಡಿಮೆಯಲ್ಲಿ ಅದೆಷ್ಟೋ ನೆಮ್ಮದಿ ಇರಬೇಕು ಅನ್ನಿಸೋದು ಸಹಜ.
ನಾವು ಹೇಳುತ್ತಿರುವ ಮಾತು ಸತ್ಯ, ಗದಗ ಜಿಲ್ಲೆಯ ಮದಗಾನೂರ ಗ್ರಾಮದ ರೈತ ಹುಚ್ಚರೆಡ್ಡಿ ಗೋವಿಂದರೆಡ್ಡಿ ಮೂಲಿಮನಿ, ತಮ್ಮ 60 ಇಳಿ ವಯಸ್ಸಿನಲ್ಲೂ ಎಂದೂ ಬತ್ತದ ಕೃಷಿಯ ಉತ್ಸಾಹದ ಚಿಲುಮೆ ಹೊಂದಿದ್ದಾರೆ.
ಆ ಮೂಲಕ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ 100/100 ಸುತ್ತಳತೆಯ ಕೃಷಿಹೊಂಡ ನಿರ್ಮಿಸಿಕೊಂಡು ಕೇವಲ ವಾಣಿಜ್ಯ ಬೆಳೆಯಲ್ಲಾ ತೋಟಗಾರಿಕೆ ಬೆಳೆ ಬೆಳೆದೂ ಸೈ ಎನಿಸಿಕೊಂಡಿದ್ದಾರೆ. ಆದ್ರೇ ಇವ್ರಲ್ಲಿ ತಾವು ಬಿಎ ಎಲ್ಎಲ್'ಬಿ ಪದವೀಧರನೆಂಬ ವರ್ಚಸ್ಸು ಚೂರಿಲ್ಲಾ ಬಿಡಿ.
ಈಗಾಗಲೇ ತಮ್ಮ 8 ಎಕರೆ ಹೊಲದಲ್ಲಿ ವಾಣಿಜ್ಯ ಬೆಳೆ ಜೊತೆ ಮೆಣಸಿನಕಾಯಿ, ಹೆಸರು ಜೊತೆ ತೋಟಗಾರಿಕೆ ಬೆಲೆ ಚಿಕ್ಕು, ಪೇರಲ್, ಮಾವು, ಮಹಾಗನಿ, ಪಪ್ಪಾಯಿ, ಅಂಜುರ್, ತೇಂಗು, ತೆಂಗಿನ ಮರಗಳನ್ನು ಬೆಳೆಸಿ ಕೃಷಿಯಲ್ಲಿ ಹೊಸ ಹೊಸ ಪ್ರಯೋಗ ಕೈಗೊಂಡಿದ್ದಾರೆ.
ದೇಶಪಾಂಡೆ ಫೌಂಡೇಶನ್ ಕೃಷಿಹೊಂಡದ ಮೂಲಕವೇ ಹೊಸ ಹೊಸ ಅವಕಾಶ ಬಳಸಿಕೊಂಡ ಇವರು, ಕೃಷಿಯಲ್ಲೂ ಸಕ್ಸಸ್ ಕಂಡು ವಾರ್ಷಿಕ 3 ಲಕ್ಷವಿದ್ದಂತಹ ಆದಾಯವನ್ನು ಇದೀಗ 10 ಲಕ್ಷದ ಸನಿಹ ತರುವಂತಹ ಶ್ರಮದ ಕಾಯಕಕ್ಕೆ ಸೈ ಎಂದು ದೇಶಪಾಂಡೆ ಫೌಂಡೇಶನ್ ಸಹಕಾರಕ್ಕೆ ಸಲಾಂ ಎಂದಿದ್ದಾರೆ.
ಒಟ್ಟಾರೆ ನಾಲ್ಕು ಅಕ್ಷರ ಕಲಿತ್ರೇ ಸಾಕು ನಗರ ಅರಸುವವರ ನಡುವೆ ಆ ಕಾಲದಲ್ಲೇ ಬಿಎ, ಎಲ್ಎಲ್'ಬಿ ಪದವಿ ಪಡೆದರು ಇಂದಿಗೂ ತಾನೇ ದಿನ ಗ್ರೇಟ್ ಪಾರ್ಮರ್ ಎನ್ನುವ ಇವರ ಚೈತನ್ಯ, ವಿಶ್ವಾಸ ನಿಜಕ್ಕೂ ಗ್ರೇಟ್.
Kshetra Samachara
22/01/2022 09:16 pm