ಜೋಡೆತ್ತು ಹೊತ್ತಾವ ಚಕ್ಕಡಿಯ ನೊಗ
ಹೊಲದಾಗ ದುಡಿತಾನ ಮಣ್ಣಿನ ಮಗ
ರೈತ ದುಡಿದಾಗಲೇ ನಲಿಯುವುದು ಜಗ
ಕಮತದ ಶ್ರಮಕ್ಕೆ ಸಮವಲ್ಲ ಸಲಗ
ಯೆಸ್..ಒಕ್ಕಲಿಗ ಒಕ್ಕದಿದರೆ ಬಿಕ್ಕುವುದು ಜಗವೆಲ್ಲ ಎಂಬ ಜನಪದಕಾರದ ಈ ಮಾತು ಯಾವ ಕಾಲಕ್ಕೂ ಸುಳ್ಳಲ್ಲ. ಯಾವುದೇ ಕೆಲಸ ನಿಂತರೂ ಸ್ವಲ್ಪ ಮಟ್ಟಿಗೆ ಸರಿದೂಗಿಸಲು ಸಾಧ್ಯ. ಆದ್ರೆ ಹೊಲದೊಳಗೆ ರೈತರ ದುಡಿಮೆ ನಿಂತರೆ ಪ್ರಪಂಚ ಹಸಿವಿನಿಂದ ನರುಳುತ್ತದೆ ಎಂಬುದು ವಾಸ್ತವಿಕ ಸತ್ಯ.
ಇವತ್ತಿನ ದೇಶ್ ಕೃಷಿ ಸಂಚಿಕೆಯಲ್ಲಿ ಸ್ವಾಭಿಮಾನಿ ಯುವ ಅನ್ನದಾತನ ಬಗ್ಗೆ ಪರಿಚಯ ಮಾಡಿಕೊಳ್ಳೋಣ. ಇವರು ನವಲಗುಂದ ತಾಲೂಕು ಇಬ್ರಾಹಿಂಪುರ ಗ್ರಾಮದ ಉತ್ಸಾಹಿ ಕೃಷಿಕ ಜಗದೇವ ಹಾಲವರ. ಪದವಿ ಮುಗಿಸಿ ನೌಕರಿ ನೆಚ್ಚಿಕೊಳ್ಳದೇ ತಮ್ಮ 25 ಎಕರೆ ಹೊಲದಲ್ಲಿ ದುಡಿದು ಲೋಕಕ್ಕೆ ಅನ್ನ ಹಾಕುತ್ತಿದ್ದಾರೆ. ಜಗದೇವ ಅವರು ಪಬ್ಲಿಕ್ ನೆಕ್ಸ್ಟ್ ಜೊತೆ ಜಗ ಮೆಚ್ಚುವ ಮಾತು ಹೇಳಿದ್ದಾರೆ. ಬನ್ನಿ ಅವರ ಮಾತು ಕೇಳೋಣ, ನೋಡೋಣ.
Kshetra Samachara
21/12/2021 05:19 pm