ನರಗುಂದ : ಕೃಷಿ ಮಾಡ್ಬೇಕು ಕೃಷಿಯಲ್ಲಿ ಏನಾದ್ರೂ ಸಾಧನೆ ಮಾಡ್ಬೇಕು ಅಂದ್ರೇ ಆ ಕೃಷಿಗೆ ಪೂರಕವಾದ ಸೌಲಭ್ಯ ಅಷ್ಟೇ ಮುಖ್ಯ ಅಲ್ವೇ ಅಂತಹದ್ದೊಂದು ಸೌಕರ್ಯ ಪಡೆದ ರೈತರೊಬ್ಬರ ಖುಷಿ ಆಕಾಶದೆತ್ತರಕ್ಕೆ ತಲುಪಿ ಕೃಷಿಹೊಂಡ ಆಶ್ರಿತ ಬೆಳೆ ಕಾಯಕ ಈ ಬಾರಿ ಲಕ್ಷ ಲಕ್ಷ ಫಲ ನೀಡಿದೆ.
ಹೌದು ! ಈ ರೈತನ ಹೆಸರು ರಾಘವೇಂದ್ರ ಗೋವಿಂದಗೌಡ್ರ ನರಗುಂದ ತಾಲೂಕಿನ ಖಾನಾಪುರ ಗ್ರಾಮದ ರೈತ ತನ್ನ 12 ಏಕರೆ ಭೂಮಿಯ ಕೃಷಿ ಕೆಲಸಕ್ಕೆ ನೆರವಾಗಲು ಅದ್ಯಾವಾಗ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಿಸಾಕೊಳ್ಳಲು ಮನಸ್ಸು ಮಾಡಿದ್ರೋ ಅಂದಿನಿಂದ ಭೂತಾಯಿ ಇವ್ರು ಲಕ್ ಬದಲಾಯಿಸಿದ್ದು ಕಡಿಮೆ ಶ್ರಮದಲ್ಲಿ ಹೆಚ್ಚಿನ ಇಳುವರಿ ಕೊಡುವ ಹತ್ತಿ, ಹೆಸರು, ಗೋವಿನಜೋಳ, ಶೇಂಗಾ, ಈರುಳ್ಳಿ ಬೆಳೆ ಎದೆ ಎತ್ತರಕ್ಕೆ ಬೆಳೆದು ನಿಂತಿದೆ.
ತಮ್ಮ 12 ಎಕರೆ ಹೊಲದಲ್ಲಿ ನೂರು ನೂರು ಸುತ್ತಳತೆ ಕೃಷಿಹೊಂಡ ನಿರ್ಮಾಣ ಮಾಡಿದ ರೈತ ರಾಘವೇಂದ್ರ ಸ್ಪಿಂಕ್ಲರ್ ಪೈಪ್ ಮೂಲಕ ನೀರಾವರಿ ಕೈಗೊಂಡು ಉತ್ತಮ ಫಸಲನ್ನು ಬೆಳೆದಿದ್ದು ಕೃಷಿಹೊಂಡ ಇರದ ದಿನಗಳಲ್ಲಿ ಇದೇ 12 ಏಕರೆ ಜಮೀನಲ್ಲಿ 2 ಲಕ್ಷ ಆದಾಯ ಕಾಣದಾದ ಇವರು ಈ ಬಾರಿ 4 ರಿಂದ 5 ಲಕ್ಷ ಅಂದ್ರೇ ಮೊದಲಿಗಿಂತ ದುಪ್ಪಟ್ಟು ಆದಾಯದ ಭರವಸೆ ಮಾರ್ಗ ಕಂಡುಕೊಂಡಿದ್ದಾರೆ.
ಮೆಟ್ರಿಕ್ ಶಿಕ್ಷಣದ ನಂತರ ಶಾಲೆಯ ಬಿಟ್ಟು ಇವರು ಕೃಷಿಯಲ್ಲಿ ಏನಾದ್ರೂ ಹೊಸ ಸಾಧನೆ ಮಾಡಬೇಕೆಂಬ ಕನಸಿಗೆ ಕೃಷಿಹೊಂಡ ಹೊಸ ಆದಾಯದ ಮಾರ್ಗ ತೋರಿದ್ದು ತನ್ನಂತ ಹಲವಾರು ಕೃಷಿಕರಿಗೆ ಸ್ವತಃ ರೈತ ರಾಘವೇಂದ್ರ ಗೋವಿಂದಗೌಡ್ರ ಕೃಷಿಹೊಂಡ ಆಶ್ರಿತ ಬೆಳೆ ಬೆಳೆಯಲು ಸಲಹೆ ನೀಡುತ್ತಿದ್ದಾರೆ.
ಒಟ್ಟಾರೆ ರೈತನಿಗೆ ಕೃಷಿಗೆ ಸಮರ್ಪಕವಾದ ನೀರಿನ ಸೌಲಭ್ಯ ಸಿಕ್ಕರೆ ಉತ್ತಮ ಫಸಲು ಬಂದ್ರೇ ಕೃಷಿ ಕ್ಷೇತ್ರ ಮತ್ತಷ್ಟೂ ಬಲಿಷ್ಠವಾಗುತ್ತೇ ಎಂಬುದಕ್ಕೆ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ನಿರ್ಮಾಣ ಕಲ್ಪನೆ ಸಾಕ್ಷಿಯಾಗಿದೆ.
Kshetra Samachara
04/10/2021 03:15 pm