ನರಗುಂದ : "ಜೈ ಜವಾನ್ ಜೈ ಕಿಸಾನ್" ರೈತ ಮತ್ತು ಯೋಧ ನಮ್ಮ ದೇಶದ ಬೆನ್ನೆಲುಬು ಅಂತಹ ರೈತಾಪಿ ಕಾಯಕ ಹಾಗೂ ದೇಶ ಸೇವೆ ಎರಡರಲ್ಲೂ ಇಲ್ಲೊಬ್ಬ ಯುವಕ ಸೈ ಎನಿಸಿಕೊಂಡು ದೇಶ ಸೇವೆ ಜೊತೆ ಜೊತೆಗೆ ರಜೆ ಅವಧಿಯಲ್ಲಿ ಭೂತಾಯಿಯ ಸೇವೆ ಗೈಯುತ್ತಾ ಮಣ್ಣಿನ ಸವಿ ಅನುಭವಿಸುತ್ತಿದ್ದಾರೆ.
ದೊಡ್ಡಪ್ಪ ಹಣುಮಂತಪ್ಪ ಮದಗುಣಕಿಯ 2 ಎಕರೆ 22 ಗುಂಟೆ ಹೊಲಕ್ಕೆ ಕೃಷಿಹೊಂಡ ಆಶ್ರಿತ ಬೇಸಾಯದ ಉಪಾಯ ತಿಳಿಸಿ ತಾವು ಸಹ ಆ ಕೃಷಿಗೆ ಹೆಗಲು ಕೊಟ್ಟು ಭೂತಾಯಿ ಒಡಲಲ್ಲಿ ಹಸಿರು ಹೊನ್ನು ಬೆಳೆದವರೇ ಈ ಲೋಕೇಶ್ ಮೈಲಾರಪ್ಪ ಮದಗುಣಕಿ.
ಮೂಲತಃ ನರಗುಂದ ತಾಲೂಕಿನ ಖಾನಾಪುರ ಗ್ರಾಮದ ಲೋಕೇಶ್ ಮದಗುಣಕಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಜೊತೆಗೆ ಕೃಷಿಯಲ್ಲೂ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ಯೋಜನೆ ಪಡೆದು ದೊಡ್ಡಪ್ಪ ಹಣುಮಂತಪ್ಪನ ಶ್ರಮದ ದುಡಿಮೆ ತಮ್ಮ ಸಹಕಾರ ನೀಡಿ ವರ್ಷಕ್ಕೆ 4 ರಿಂದ 5 ಲಕ್ಷ ಆದಾಯವನ್ನು ಬೆಳೆಯಲ್ಲೇ ಗಳಿಸುತ್ತಿದ್ದಾರೆ.
ಹತ್ತಿ, ಹೆಸರು, ಗೋವಿನಜೋಳ, ಶೇಂಗಾ, ಈರುಳ್ಳಿ ಸೇರಿದಂತೆ ಕೇವಲ 2 ಏಕರೆ 22 ಗುಂಟೆ ಜಮೀನಿನಲ್ಲಿ 5 ಬೆಳೆ ಬೆಳೆದು ಪಂಚಲಕ್ಷ ಆದಾಯಕ್ಕೆ ಸೈ ಎಂದಿದ್ದಾರೆ, ಇದೇ ಕೃಷಿಹೊಂಡ ಇರದ ಸಂದರ್ಭ 2 ಲಕ್ಷ ಆದಾಯವೇ ಕಷ್ಟವಾದ ದಿನಗಳಲ್ಲಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದ ಕೃಷಿಹೊಂಡ ಕಲ್ಪನೆ ಅಸಾಧ್ಯವಾದ ವರ ನೀಡಿ ದೊಡ್ಡಪ್ಪ ಹಣುಮಂತಪ್ಪ ಮದಗುಣಕಿಗೆ ಶ್ರಮಕ್ಕೆ ಯೋಧ ಲೋಕೆಶ್ ಮದಗುಣಕಿ ಜಾಣ್ಮೆ ಫಲ ನೀಡಿದೆ.
ಒಟ್ಟಾರೆ ಸರ್ಕಾರಿ ವೃತ್ತಿ ಸಿಕ್ರೇ ಕೃಷಿ ಭೂಮಿ ಮರೆತು ಮಣ್ಣಿನ ಋಣ ತೊರೆಯುವವರ ನಡುವೆ ದೇಶ ಸೇವೆ ಜೊತೆ ಕೃಷಿ ಕಾರ್ಯಕ್ಕೂ ಸೈ ಎನ್ನುವ ಲೋಕೆಶ್ ನಿಜವಾದ ಸಾಧಕ ದೇಶ ಸೇವಕ.
Kshetra Samachara
26/09/2021 11:59 am