ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನರಗುಂದ: ಕೃಷಿಹೊಂಡ ನಿರ್ಮಾಣದ ಫಲ ರೈತರ ಬದುಕಲ್ಲಿ ಸದೃಡ ಆರ್ಥಿಕತೆಯ ಜಯ

ನರಗುಂದ : ಆ ಊರಲ್ಲಿ ನೀರಾವರಿ ಸೌಲಭ್ಯ ಅಂತರ್ಜಲದ ಮಟ್ಟ ಕುಸಿದ ಪರಿಣಾಮ ಹೇಳ ಹೆಸರಿಲ್ಲದಂತಾಗಿದೆ ಬೆಳೆಯ ಫಲ,ಮಳೆ ಆಶ್ರೀತ ಬೇಸಾಯಕ್ಕೆ ಸಕಾಲಕ್ಕೆ ಮಳೆದೇವ ಕೃಪೆ ತೋರುವುದು ಕಷ್ಟದ ಮಾತಾಗಿದೆ, ಪರಿಸ್ಥಿತಿ ಹೀಗಿದ್ದರೂ ಅಲ್ಲಿನ ರೈತರ ಕೃಷಿ ಬದುಕಿಗೆ ದೇಶಪಾಂಡೆ ಫೌಂಡೇಶನ್ ನೆರವು ರೈತರ ಹೊಲಗಳಲ್ಲಿ ಹಸಿರು ಹೊದಿಕೆ ಹಾಸಿದ್ದು ಲಕ್ಷ ಲಕ್ಷ ಆದಾಯಕ್ಕೆ ದಾರಿ ತೋರಿದೆ.

ಅರೇ.! ಮಳೆಯೂ ಕಡಿಮೆ ನೀರಾವರಿಯೂ ಇಲ್ಲಾ, ಅದ್ಹೇಗೆ ಲಕ್ಷ ಆದಾಯ ಎಂದು ಯೋಚಿಸುವ ನಿಮ್ಮ ಆಲೋಚನೆ ಕರೆಕ್ಟ್, ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದಲಿಯಲ್ಲೇ ಇಂತಹದೊಂದು ಬದಲಾವಣೆ ಕಂಡಿದ್ದು ರೈತ ಈರಪ್ಪ ಕಳಕಪ್ಪ ಬಂಡಿ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಾಗ ನಿರ್ಮಿಸಿಕೊಂಡ ಕೃಷಿಹೊಂಡವೇ ನಾವು ಹೇಳುವ ಈಗ ನೀವೂ ನೋಡುತ್ತಿರುವ ಲಕ್ಷ ಆದಾಯದ ನೈಜ ಕಥೆಗೆ ದಾರಿದೀಪ.

ಈ ರೈತನ ಹೆಸರು ಮುತ್ತಪ್ಪ ಈರಪ್ಪ ಮುದೇನಗುಡಿ, ತನ್ನ 8 ಎಕರೆ 14 ಗುಂಟೆ ಹೊಲದಲ್ಲಿ ಹೆಸರು, ಗೋವಿನಜೋಳ, ಈರುಳ್ಳಿ, ಹತ್ತಿ ಬೆಳೆ ನೋಡಿದ್ರೇ ಹಸಿದ ಹೊಟ್ಟೆ ತುಂಬತ್ತೇ ಬೆಳೆ ಮೂಟೆ ಲಕ್ಷ ಸಂಪಾದನೆಯ ದಾರಿ ತೋರುತ್ತೇ, ಅಂತಹ ಫಸಲನ್ನ ನೂರು ನೂರು ಸುತ್ತಳತೆಯ ದೇಶಪಾಂಡೆ ಫೌಂಡೇಶನ್ ಸಹಭಾಗಿತ್ವದಲ್ಲಿ ನಿರ್ಮಾಣವಾದ ಕೃಷಿ ಹೊಂಡದ ಸ್ಪಿಂಕ್ಲರ್ ಪೈಪ್ ಆಶ್ರಿತ ನೀರಾವರಿ ಕಲ್ಪಿಸಿಕೊಟ್ಟಿದೆ.

ಇದೇ ಕೃಷಿಹೊಂಡ ಇರದ ದಿನಗಳಲ್ಲಿ ಆಕಾಶ ನೋಡುತ್ತಾ ಅರೆ ಬರೆ ಬೆಳೆ ಬೆಳೆದು ಆದಾಯಕ್ಕಿಂತ ನಷ್ಟದ ಮುಖ ನೋಡುತ್ತಿದ್ದ ರೈತ ಮುತ್ತು ಈ ಬಾರಿ 8 ಲಕ್ಷ ಸಂಪಾದನೆ ಮಾಡುತ್ತೇನೆ ಎನ್ನುವ ಧೈರ್ಯ ಹಾಗೂ ಉತ್ತಮ ಫಸಲಿನ ನೀರಿಕ್ಷೆಯನ್ನು ಕೃಷಿಹೊಂಡ ನಿರ್ಮಾಣ ಕಾರ್ಯ ಫಲ ನೀಡಿ ಸದೃಡ ಆರ್ಥಿಕ ಬದುಕಿಗೆ ನಾಂದಿ ಹಾಡಿದೆ.

ನೀವೂ ಸಹ ರೈತ ಮುತ್ತುವಿನ ಕೃಷಿ ಬದುಕಿನ ಗರಿಷ್ಠ ಆದಾಯದ ಅನುಭವ ಕೇಳಲು ಮೊಬೈಲ್ ಸಂಖ್ಯೆ 9880509420 ಕರೆ ಮಾಡಿ, ಆಸಕ್ತಿ ಇದ್ದಲ್ಲಿ ಇಂದೇ ಕೃಷಿಹೊಂಡ ನಿರ್ಮಿಸಿಕೊಳ್ಳಿರಿ.

Edited By : Manjunath H D
Kshetra Samachara

Kshetra Samachara

19/09/2021 06:22 pm

Cinque Terre

138.24 K

Cinque Terre

0

ಸಂಬಂಧಿತ ಸುದ್ದಿ