ಒಂದೆಡೆ ಮಳೆಯ ಕಣ್ಣುಮುಚ್ಚಾಲೆ ಇನ್ನೊಂದೆಡೆ ಬರಗಾಲ ಬವಣೆ. ಇವರೆಡರ ಮಧ್ಯ ಸಿಲುಕಿ ನವಲಗುಂದ ತಾಲೂಕಿನ ಕಡದಳ್ಳಿ ಗ್ರಾಮದ ರೈತ ಬಸವಳಿದು ಹೋಗಿದ್ದ.
ಮಳೆಯನ್ನೇ ನಂಬಿ ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳಲು ಹೆಣಗಾಡಿದ ಕಡದಳ್ಳಿ ಗ್ರಾಮದ ಪದವಿಧರ ರೈತ ಈಶ್ವರಪ್ಪ ಕುಂಬಾರ, ಈಗ ದೇಶಪಾಂಡೆ ಫೌಂಡೇಶನ್ ನೆರವಿನಿಂದ ನಿರ್ಮಿಸಿದ ಕೃಷಿಹೊಂಡ ತಮ್ಮ ಬರ ನೀಗಿಸಿದೆ ಎಂಬಂತೆ ಖುಷಿಯಿಂದ ಹೇಳುತ್ತಾರೆ. ವೃದ್ಧಾಪ್ಯದಲ್ಲಿಯೂ ಇವರು ಕೃಷಿ ಸ್ಫೂರ್ತಿ ಇತರರಿಗೆ ಮಾದರಿ.
ಹೊಂಡದಲ್ಲಿ ಮಳೆ ನೀರನ್ನು ಸಂಗ್ರಹಿಸಲಾಗುತ್ತಿದೆಯಲ್ಲದೆ ಪೈಪ್ ಮೂಲಕ ಬೆಣ್ಣಿಹಳ್ಳದ ನೀರನ್ನು ಹೊಂಡಕ್ಕೆ ಸಾಗಿಸಲಾಗುತ್ತಿದೆ. ಇದೇ ನೀರು ಬೇಸಿಗೆ ಹಾಗೂ ಬರಗಾಲದಲ್ಲಿ ನೆರವಾಗುತ್ತಿದೆ ಎನ್ನುತ್ತಾರೆ.
ಒಂಭತ್ತು ಎಕರೆ ಜಮೀನಿನಲ್ಲಿ ನಿರ್ಮಿಸಿದ 90 ಅಡಿ ಉದ್ದ 90 ಅಡಿ ಅಗಲ ಹಾಗೂ 12 ಅಡಿಯ ಕೃಷಿಹೊಂಡ ಇವರಿಗೆ ಜೀವಾಧಾರ. ಫೌಂಡೇಶನ್ ಹೊಂಡ ಮಾತ್ರ ನಿರ್ಮಿಸಿಕೊಟ್ಟಿಲ್ಲ ಬೀಜ.ಗೊಬ್ಬರ, ಕೀಟನಾಶಕ,ತಾಡಪತ್ರಿ ಸೇರಿದಂತೆ ಕೃಷಿಗೆ ಅಗತ್ಯವಿರುವ ಎಲ್ಲ ನೆರವು ಸಹಕಾರ ನೀಡುತ್ತಿದೆ ಎಂದು ಸ್ಮರಿಸುತ್ತಾರೆ.
ಇವರು ಮೊದಲು ಎಕರೆಗೆ 80 ರಿಂದ 90 ಸಾವಿರ ಆದಾಯ ಪಡೆಯುತ್ತಿದ್ದರು. ಈಗ ಅದು 3 ರಿಂದ 4 ಲಕ್ಷ ಆಗಿದೆಯಂತೆ. ಹತ್ತಿ. ಗೋದಿ, ಹೆಸರು ಕಡಲೆ ಬೆಳೆಯುತ್ತಿದ್ದ ಇವರು ಈಗ ಹೆಚ್ಚುವರಿಯಾಗಿ ಗೋವಿನ ಜೋಳ, ಸನ್ ಫ್ಲಾವರ್ ಸಹ ಬೆಳೆಯುತ್ತಿದ್ದಾರಂತೆ.
ಕೃಷಿಹೊಂಡ ತೆಗೆಯಲು ಯಾರೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಒಂದರೆಡು ಗುಂಠೆ ಜಮೀನಿನಲ್ಲಿ ಹೊಂಡ ತೆಗೆದರೆ ಸಂಪೂರ್ಣ ಹೊಲಕ್ಕೆ ನೀರು ಸಿಗುತ್ತಿರುವಾಗ ಯಾರು ಅಡ್ಡಿ ಮಾಡುತ್ತಾರೆ ನೀವೇ ಹೇಳಿ ಎಂದು ಪ್ರಶ್ನಿಸುತ್ತಾರೆ. ವ್ಯರ್ಥವಾಗಿ ಹರಿದು ಹೋಗುವ ಮಳೆನೀರನ್ನು ಕೃಷಿ ಹೊಂಡದ ಮೂಲಕ ಮರುಬಳಕೆ ಮಾಡಿಕೊಳ್ಳವುದು ರೈತರ ಜಾಣತನ ಎಂಬುದು ಇವರ ಮಾತಿನ ತಾತ್ಪರ್ಯ.
Kshetra Samachara
26/02/2021 07:32 pm