ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈತನ ಬದುಕಿನಲ್ಲಿ ಆಶಾಕಿರಣವಾದ ದೇಶಪಾಂಡೆ ಫೌಂಡೇಶನ್

'ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೇಲ್ಲಾ' ಎನ್ನುವ ನಾನುಡಿಯಂತೆ ಒಂದೊಮ್ಮೆ ರೈತ ಕೈ ಕಟ್ಟಿ ಕುಳಿತರೆ ಇಡೀ ವಿಶ್ವವೇ ನರಕಯಾತನೆ ಅನುಭವಿಸಬೇಕಾಗುತ್ತದೆ. ಹಾಗಾಗಿ ರೈತರನ್ನು ಬಾಯಿ ಮಾತಿನಲ್ಲಿ ಬೆಂಬಲಿಸುವ ಬದಲು ಅವರು ಅನುಭವಿಸುವ ಸಮಸ್ಯೆಗಳಿಗೆ ಪರಿಹಾರ ನೀಡಿ ಅವರ ದುಡಿಯುವ ಕೈಗಳಿಗೆ ಬಲ ತುಂಬುವ ಕಾರ್ಯ ಮಾಡುತ್ತಿದೆ ದೇಶಪಾಂಡೆ ಫೌಂಡೇಶನ್. ರೈತರ ಬಗ್ಗೆ ನಿಜವಾದ ಒಲವು ಹೊಂದಿರುವ ದೇಶಪಾಂಡೆ ಫೌಂಡೇಶನ್ ಅನ್ನದಾತರ ಏಳಿಗೆಗಾಗಿ ಶ್ರಮಿಸುತ್ತಿದೆ.

ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲೂಕಿನ ಬಲ್ಲರವಾಡ ಗ್ರಾಮದ ವಿವೇಕಾನಂದ ಗಾಳಪ್ಪನವರ ಎಂಬ ರೈತನ ಬದುಕಿನಲ್ಲಿ ಆಶಾಕಿರಣವಾಗಿದೆ ದೇಶಪಾಂಡೆ ಫೌಂಡೇಶನ್. ಪಿಯುಸಿ ವಿದ್ಯಾಭ್ಯಾಸ ಪೂರೈಸಿದ 47 ವರ್ಷದ ರೈತ ವಿವೇಕಾನಂದ ಅವರು ತಮ್ಮ 6 ಎಕರೆ ಭೂಮಿ ನಂಬಿ ಕೃಷಿ ಮಾಡಲು ಮುಂದಾಗಿದ್ದರು. ಆದರೆ ಮಳೆಯಾಶ್ರಿತ ಭೂಮಿ ಹೊಂದಿರುವ ರೈತ ಲಾಭಕ್ಕಿಂತಲೂ ನಷ್ಟ ಅನುಭವಿಸಿದ್ದೇ ಹೆಚ್ಚು.

ಕೃಷಿ ನಂಬಿ ಬದುಕು ಕಟ್ಟಿಕೊಳ್ಳಲು ಮುಂದಾದ ರೈತ ಮಳೆ ನಂಬಿ ಭೂಮಿಗೆ ಬೀಜ ಹಾಕಿ ಆಕಾಶದತ್ತ ನೋಡುತ್ತ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವುದು ಸಾಮಾನ್ಯವಾಗಿತ್ತು. ಈ ವೇಳೆ ದುಡಿಯುವ ಕೈಗಳು ಕೈಕಟ್ಟಿ ಕುಳಿತ್ತಿರುವುದನ್ನು ಕಂಡ ದೇಶಪಾಂಡೆ ಫೌಂಡೇಶನ್ ರೈತನ ಬೆನ್ನಿಗೆ ನಿಂತು ಸಹಕರಿಸಿದೆ. ಅನ್ನದಾತನ ನಿಜವಾದ ಸಮಸ್ಯೆಯನ್ನು ಅರಿತು ಅವರಿಗೆ ಅಗತ್ಯವಿರುವ ಮಾಹಿತಿ ನೀಡುವುದರೊಂದಿಗೆ ಮತ್ತೆ ಕೃಷಿಯಲ್ಲಿ ಒಲವು ಮೂಡುವಂತೆ ಮಾಡಿದೆ. ರೈತನ 6 ಎಕರೆ ಹೊಲದ ಒಂದು ಬದಿಯಲ್ಲಿ 100 ಅಡಿ ಉದ್ದ 100 ಅಡಿ ಅಗಲ ಹಾಗೂ 12 ಅಡಿ ಆಳದ ಕೃಷಿಹೊಂಡ ನಿರ್ಮಿಸಿಕೊಡುವ ಮೂಲಕ ಮತ್ತೆ ಕೃಷಿ ಮಾಡಲು ಚೈತನ್ಯ ತುಂಬಿದೆ.

ದೇಶಪಾಂಡೆ ಫೌಂಡೇಶನ್ ನಿಂದ ಬದುಕು ಬದಲಾದ ಬಗ್ಗೆ ರೈತ ಹೇಳುವುದು ಹೀಗೆ

ಕೆರೆ ನಿರ್ಮಾಣದ ಪೂರ್ವದಲ್ಲಿ ರೈತ ಮುಂಗಾರು ಮಳೆ ನಂಬಿ ಶೇಂಗಾ,ಹೆಸರು ಬಿತ್ತನೆ ಮಾಡಿ ವಾರ್ಷಿಕ 50 ರಿಂದ 60 ಸಾವಿರ ಮಾತ್ರ ಆದಾಯಗಳಿಸುತ್ತಿದ್ದ ಆದರೆ ದೇಶಪಾಂಡೆ ಫೌಂಡೇಶನ್ ನಿಂದ ಕೆರೆ ನಿರ್ಮಿಸಿಕೊಂಡ ಬಳಿಕ ಮೆಕ್ಕೆಜೋಳ, ಹೆಸರು, ಗೋಧಿ ಸೇರಿದಂತೆ ವಿವಿಧ ಬೆಳೆ ಬೆಳೆಯುವ ಮೂಲಕ ವಾರ್ಷಿಕ ಬರೋಬ್ಬರಿ 1 ಲಕ್ಷದಿಂದ 1 ಲಕ್ಷದ 20 ಸಾವಿರದವರೆಗೂ ಆದಾಯಗಳಿಸುತ್ತಿದ್ದಾರೆ.

ಒಟ್ಟಿನಲ್ಲಿ ಕೃಷಿಯಿಂದ ಬದುಕು ನಡೆಸುವುದು ದುಸ್ಥರವಾದ ರೈತನ ಬಾಳಲ್ಲಿ ಬೆಳಕಾದ ದೇಶಪಾಂಡೆ ಫೌಂಡೇಶನ್ ಕಾರ್ಯ ನಿಜಕ್ಕೂ ಶ್ಲಾಘನೀಯ…

Edited By : Manjunath H D
Kshetra Samachara

Kshetra Samachara

09/02/2021 08:08 pm

Cinque Terre

65.09 K

Cinque Terre

3

ಸಂಬಂಧಿತ ಸುದ್ದಿ