ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೈತ ಬೆಳೆದ ಮಿಶ್ರ ಬೆಳೆ: ಹೊಲಕ್ಕೆ ತಂದಿತು ಹೊಸ ಕಳೆ

ಜೀವಜಲದ ಜಾಲ ಈ ಭುವಿಯ ತುಂಬ ಹಬ್ಬಿದೆ. ಮಣ್ಣು ನೀರು ಕೂಡಿದರೆ ಅಲ್ಲಿ ಜೀವಸತ್ವ ಬೆಳೆಯುತ್ತದೆ. ಫಲವತ್ತತೆ ಒಡಮೂಡುತ್ತದೆ. ಇಂತಹ ಫಲವತ್ತಾದ ಮಣ್ಣಿನಲ್ಲಿ ಬಂಗಾರದಂತ ಬೆಳೆ ಬೆಳೆಯುವ ರೈತ ಇಲ್ಲಿದ್ದಾರೆ.

ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲೂಕಿನ ಬಲ್ಲರವಾಡ ಗ್ರಾಮದ ಈ ಪ್ರಗತಿಪರ ಕೃಷಿಕ ರಾಸಾಯನಿಕ ಗೊಬ್ಬರ ಬಳಸದೇ ಸಂಪೂರ್ಣ ಸಾವಯವ ಕೃಷಿ ಮಾಡ್ತಿದ್ದಾರೆ. ಈ ಮೂಲಕ ಸ್ವಾವಲಂಬಿ ಕೃಷಿಕ ಎನಿಸಿಕೊಂಡಿದ್ದಾರೆ.

ತಮ್ಮ 5 ಎಕರೆ ಹೊಲದಲ್ಲಿ ರೇಷ್ಮೆ ಬೆಳೆ ಬೆಳೆದು ಅದರ ನಡುವೆ ಮಿಶ್ರ ಬೆಳೆ ಬೆಳೆಯುತ್ತಿದ್ದಾರೆ. ವರ್ಷಕ್ಕೆ 2ಬೆಳೆಗಳ ಇಳುವರಿ ಪಡೆಯುತ್ತಿರುವ ವಿರುಪಾಕ್ಷಪ್ಪ ವರ್ಷಕ್ಕೆ ಒಂದೂವರೆ ಲಕ್ಷ ಆದಾಯ ಪಡೆಯುತ್ತಿದ್ದಾರೆ. ಇವರ ಈ ಯಶಸ್ಸಿನ ಹಿಂದೆ ಇರುವ ಗುಟ್ಟು ದೇಶಪಾಂಡೆ ಫೌಂಡೇಶನ್.

ಹೌದು..ದೇಶಪಾಂಡೆ ಫೌಂಡೇಶನ್ ನೆರವು ಪಡೆದುಕೊಂಡ ಅನ್ನದಾತ ವಿರುಪಾಕ್ಷಪ್ಪ ಗಾಳಪ್ಪನವರ ತಮ್ಮ 5ಎಕರೆ ಜಮೀನಿನಲ್ಲಿ ಕೃಷಿಹೊಂಡ ನಿರ್ಮಿಸಿಕೊಂಡಿದ್ದಾರೆ. ಅಂದಿನಿಂದ ಇದು ಅವರ ಪಾಲಿಗೆ ಕೃಷಿಹೊಂಡ ಅಷ್ಟೇ ಅಲ್ಲ. ಹಸಿರು ಸಿರಿಯ ಅಕ್ಷಯ ಪಾತ್ರೆಯಾಗಿದೆ. ?ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಮಳೆ ಬಂದರೂ ಬಾರದಿದ್ದರೂ ಇವರ ಹೊಲದಲ್ಲಿ ಹಸಿರ ಹೊನ್ನು ರಾರಾಜಿಸುತ್ತ ಇರುತ್ತೆ. ಅದನ್ನ ರೈತ ವಿರುಪಾಕ್ಷಪ್ಪ ಖುಶಿಯಿಂದ ಹೇಳ್ತಾರೆ.

ನವಲಗುಂದ ಭಾಗ ಸಂಪೂರ್ಣ ಬಯಲು ಸೀಮೆಯಿಂದ ಕೂಡಿದೆ‌. ಇಲ್ಲಿ ಹಿಂಗಾರು ಹಂಗಾಮಿನ ಬೆಲೆ ನಿರೀಕ್ಷಿತ ಪ್ರಮಾಣದಲ್ಲಿ ಬರಲು ಸಾಧ್ಯವೇ ಇಲ್ಲ. ಆದ್ರೆ ಈ ಮಾತನ್ನ ವಿರುಪಾಕ್ಷಪ್ಪ ಅವರು ಸುಳ್ಳಾಗಿಸಿದ್ದಾರೆ. ಹಿಂಗಾರಿನಲ್ಲಿ ಕಡಲೆ, ಜೋಳ, ಗೋಧಿ ಹಾಗೂ ಇತರ ಬೆಳೆಗಳನ್ನು ಕೃಷಿಹೊಂಡದ ನೀರನ್ನೇ ಬಳಸಿ ಬೆಳೆಯುತ್ತಿದ್ದಾರೆ. ಜೊತೆಗೆ ತಮ್ಮ ಊರಿನ ಎಫ್ ಪಿ ಒ ಕಲ್ಮೇಶ್ವರ ಸಂಘದ ಬೀಜ ಗೊಬ್ಬರ ಸೌಲಭ್ಯಗಳನ್ನೂ ಪಡೆದುಕೊಂಡಿದ್ದಾರೆ.

ಯಾರೂ ಅರಿಯದ ನೇಗಿಲಯೋಗಿ ಲೋಕಕೆ ಅನ್ನವನೀಯುವನು ಎಂಬ ಕುವೆಂಪು ಅವರ ಕವಿವಾಣಿಯಂತೆ ಅತಿಸುಖ ಬಯಸದೇ ಮಣ್ಣನ್ನೇ ಆರಾಧಿಸುತ್ತ ದುಡಿಯುತ್ತಿದ್ದಾರೆ ಅನ್ನದಾತ ವಿರುಪಾಕ್ಷಪ್ಪ ಗಾಳಪ್ಪನವರ್...

Edited By : Manjunath H D
Kshetra Samachara

Kshetra Samachara

07/02/2021 08:04 pm

Cinque Terre

64.83 K

Cinque Terre

2

ಸಂಬಂಧಿತ ಸುದ್ದಿ