ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೃಷಿಹೊಂಡಗಳು : ಒಣ ಭೂಮಿಗೆ ಹಸಿರು ಹೊದಿಕೆ ಹಾಸಿದ ದೇಶಪಾಂಡೆ ಫೌಂಡೇಶನ್

'' ಒಂದು ತುತ್ತು ತಿನ್ನುವಾಗ ಹತ್ತು ಬಾರಿ ರೈತನನ್ನು ನೆನೆ '' ಹೌದು ಎಂತಹ ಮಾರ್ಮಿಕ ಮಾತು. ನಮ್ಮ ಪ್ರತಿ ತುತ್ತು ಆ ಅನ್ನದಾತನ ಸೊತ್ತು, ಹುಟ್ಟಿದಾಗಿನಿಂದ ಸಾಯುವವರೆಗೂ ನಾವು ಆತನ ಋಣದಲ್ಲಿರುತ್ತೇವೆ ಎಂದರೂ ತಪ್ಪಾಗಲಾರದು.

ರೈತ ಬಿತ್ತನೆ ಬೀಜ, ದನಕರುಗಳಿಗೆ ಮೇವು ಸಂಗ್ರಹಿಸುವಂತೆ ಮಳೆ ನೀರನ್ನು ಸಂಗ್ರಹಿಸುವುದು ಅನಿವಾರ್ಯವಾಗಿದೆ. ಈತನ ಈ ಕಾಯಕಕ್ಕೆ ಬೆಂಬಲವಾಗಿ ನಿಂತಿದೆ ದೇಶಪಾಂಡೆ ಫೌಂಡೇಶನ್ ಕೃಷಿ ಹೊಂಡ ಯೋಜನೆ. ಇವು ಕೃಷಿಕನ ಜಲಪಾತ್ರೆ ಎಂದು ಹೇಳಬಹುದು. ಬೇಸಿಗೆಯಲ್ಲಿ ಈ ನೀರನ್ನು ಸಮರ್ಪಕವಾಗಿ ಬಳಕೆ ಮಾಡಿ ಲಾಭ ಗಳಿಸುತ್ತಿರುವ ನವಲಗುಂದ ತಾಲೂಕಿನ ನಾವಳ್ಳಿ ಗ್ರಾಮದ ಪದವೀಧರ ರೈತ ಶಿವಪ್ಪ ಹೂಗಾರ ಇತರರಿಗೆ ಮಾದರಿಯಾಗಿದ್ದಾರೆ.

ಮೊದಲು ಮಳೆಯಿಂದಲೆ ಕೇವಲ ಹೆಸರು ಹಾಗೂ ಜೋಳ ಬೆಳೆದು ಎಕರೆಗೆ 40 ರಿಂದ 50 ಸಾವಿರ ಆದಾಯಕ್ಕೆ ಪ್ತಿಪಟ್ಟುಕೊಳ್ಳುತ್ತಿದ್ದರು. ದೇಶಪಾಂಡೆ ಫೌಂಡೇಶನ್ ನೆರವಿನಿಂದ ತಮ್ಮ ಐದು ಎಕರೆ ಹೊಲದಲ್ಲಿ 100 ಅಡಿ ಉದ್ದ 200 ಅಡಿ ಅಗಲ ಹಾಗೂ 15 ಆಳದ ಹೊಂಡ ನಿರ್ಮಿಸಿದ್ದಾರೆ.

ಮಳೆಯಿಂದ ಅದರಲ್ಲಿ ಸಂಗ್ರಹವಾದ ನೀರಿನಿಂದ ಈರುಳ್ಳಿ, ಕಡಲೆ ಬೆಳೆಯುತ್ತಿದ್ದಾರಲ್ಲದೆ ಪೇರಲ ಹಣ್ಣಿನ ಗಿಡಗಳನ್ನು ನಾಟಿ ಮಾಡಿದ್ದಲ್ಲದೆ ಇತ್ತೀಚೆಗೆ ಜೇನು ಸಾಕಾಣಿಕೆಗೂ ಕೈಹಾಕಿ ಸೈಎನಿಸಿಕೊಂಡಿದ್ದಾರೆ. ಅಂದು ಅವರ ಆದಾಯ 50 ಸಾವಿರ ಇದ್ದರೆ ಈಗ ಎಕರೆಗೆ 1.3 ಲಕ್ಷ. ಬನ್ನಿ ಅವರ ಯಶೋಗಾಥೆ, ಪರಿಶ್ರಮ ಶಿವಪ್ಪ ಅವರಿಂದಲೇ ಕೇಳೋಣ.

Edited By : Manjunath H D
Kshetra Samachara

Kshetra Samachara

06/02/2021 10:00 pm

Cinque Terre

55.15 K

Cinque Terre

5

ಸಂಬಂಧಿತ ಸುದ್ದಿ