ದೇಶಪಾಂಡೆ ಫೌಂಡೇಶನ್ ರೂಪಿಸಿದ ಕೃಷಿ ಹೊಂಡ ಯೋಜನೆ ಇಂದು ಶಲವಡಿ ಗ್ರಾಮದ ಭೀಮರೆಡ್ಡಿ ಕನಕರೆಡ್ಡಿ ಅವರ ಬದುಕನ್ನೇ ಬದಲಿಸಿದೆ. ಮಳೆಯನ್ನೇ ನಂಬಿ ಒಣಬೇಸಾಯ ಮಾಡುತ್ತಿದ್ದ ಇವರ ಮೂರು ಎಕರೆ ಹೊಲದಲ್ಲಿ ಬಿತ್ತಿದ್ದ ಗೋದಿ ಬಂದೆರೆ ಬಂತು ಇಲ್ಲದಿದ್ದರೆ ಇಲ್ಲ. ಈಗ ತೆಗೆದ 70 X 70 ಉದ್ದದ ಹೊಂಡದ ನೀರು ಸಮಸ್ತ ಹೊಲಕ್ಕೆ ನೀರುಣಿಸುತ್ತಿದೆ.
ಮೊದಲು ಎಕರೆಗೆ ಕೇವಲ ಎರಡು ಚೀಲ ಗೋದಿ ಬೆಳೆಯುತ್ತಿತ್ತು. ಕೆರೆ ನಿರ್ಮಾಣವಾದ ನಂತರ ನಮ್ಮ ಅದೃಷ್ಟವೇ ಖುಲಾಯಿಸಿದೆ. ಅದು ಡಬಲ್ ಆಗಿದೆ. ಅಂದರೆ ಒಟ್ಟು ಮೂರ ಎಕರೆಯಲ್ಲಿ ಮೂರರಿಂದ ಐದಾರು ಚೀಲ ಬಂದರೆ ಅದೇ ದೊಡ್ಡದಾಗಿತ್ತು. ಈಗ 10 ರಿಂದ 15 ಬರುತ್ತಿದೆ ಅಂದರೆ ಯಾರಿಗೆ ಖುಷಿಯಾಗುವುದಿಲ್ಲ ನೀವೇ ಹೇಳಿ ಎನ್ನುತ್ತಾರೆ ಭೀಮರೆಡ್ಡಿ ಕನಕರೆಡ್ಡಿ . ಈ ಹಿಂದೆ ಅಬ್ಬಬ್ಬಾ ಅಂದರೆ ಒಟ್ಟಾರೆ 20 ಸಾವಿರ ರೂ ಲಾಭವಾಗುತ್ತಿತ್ತು. ಕಳೆದ ವರ್ಷ 35 ರಿಂದ 40 ಸಾವಿರ ಲಾಭವಾಗಿದೆ.ಇದಕ್ಕೆಲ್ಲ ಕಾರಣ ದೇಶಪಾಂಡೆ ಫೌಂಡೇಶನ್ ನೀಡಿದ ಪ್ರೋತ್ಸಾಹ ಕಾರಣ ಎಂದು ಹೇಳಲು ಭೀಮರೆಡ್ಡಿ ಮೆರಯುವುದಿಲ್ಲ.
ಫೌಂಡೇಶನದವರು ಮೊದಲು ಸಭೆ ಕರೆದು ಹೇಳಿದಾಗ ನಾವು ಅಷ್ಟಾಗಿ ನಂಬಿರಲಿಲ್ಲ.ಆದರೆ ಕೆರಯಿಂದಾಗುವ ಲಾಭ, ಬೀಜ ಗೊಬ್ಬರದ ಬಗ್ಗೆ ಅವರು ಮಾಹಿತಿ ನೀಡಿದ್ದರಿಂದ ನಾವು ಹೆಮ್ಮೆಯ ರೈತರಾಗಿ ನಿಂತಿದ್ದೇವೆ ಎನ್ನುತ್ತಾರೆ. ಬನ್ನಿ ಅವರಿಂದಲೇ ಕೇಳೋಣ ಅವರ ಅನುಭವವನ್ನು.
Kshetra Samachara
01/02/2021 06:29 pm