ಕುಂದಗೋಳ : ಸರ್ಕಾರ ಈಗಾಗಲೇ ಬೆಂಬಲ ಬೆಲೆ ಯೋಜನೆಯಡಿ ಬಿಟಿ ಹತ್ತಿ. ಖರೀದಿ ಕೇಂದ್ರವನ್ನ ಹುಬ್ಬಳ್ಳಿ ಹಾಗೂ ಅಣ್ಣಿಗೇರಿ ಪಟ್ಟಣದಲ್ಲಿ ತೆರೆದು ರೈತರ ಕಷ್ಟಕ್ಕೆ ಮಿಡಿದಿದೆ. ಆದ್ರೇ ಈ ಕುಂದಗೋಳ ತಾಲೂಕಿನ ರೈತರು ತಮ್ಮ ತಾಲೂಕಿನಲ್ಲೂ ಹತ್ತಿ ಖರೀದಿ ಕೇಂದ್ರ ತೆರೆಯಲು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದಾರೆ.
ಈ ವರ್ಷದ ಅತಿವೃಷ್ಟಿ ಪರಿಣಾಮ ಕುಂದಗೋಳ ತಾಲೂಕಿನಲ್ಲಿ ಮೆಣಸಿನಕಾಯಿ ಬೆಳೆ ನಾಶವಾಗಿದ್ದು, ಆ ಭೂಮಿಯಲ್ಲಿ ರೈತರು ಮರಳಿ ಹತ್ತಿ ಹಾಕಿದ್ದಾರೆ. ತಾಲೂಕಿನಲ್ಲಿ ಪ್ರತಿ ವರ್ಷದ ಅಂದಾಜಿಗಿಂತ ತುಸು ಹೆಚ್ಚು ವಾಣಿಜ್ಯ ಬೆಳೆ ಹತ್ತಿಯನ್ನ ರೈತರು ಬೆಳೆದಿದ್ದಾರೆ.
ಈಗಾಗಲೇ ರೈತರು ಹತ್ತಿ ಬೆಳೆಗೆ ಕೆಂಪು ಹುಳು ಕಾಟ ಹೆಚ್ಚಾಗಿದ್ದು, ದಲ್ಲಾಳಿಗಳು ವ್ಯಾಪಾರಿಗಳು 4 ಸಾವಿರಕ್ಕಿಂತ ಹೆಚ್ಚಿನ ಬೆಲೆಗೆ ಹತ್ತಿ ಕೇಳುತ್ತಿಲ್ಲ. ಇನ್ನು ಹುಬ್ಬಳ್ಳಿಗೆ ಟ್ರ್ಯಾಕ್ಟರ್ ಸಮೇತ ಹತ್ತಿ ಕೊಂಡೊಯ್ಯಲು ಕೆಲ ರೈತರ ಬಳಿ ವಾಹನ ಸೌಲಭ್ಯವಿಲ್ಲ.
ವಾಹನ ಇದ್ದವರು ಈ ಹಿಂದೆ ಹತ್ತಿ ಮಾರಾಟಕ್ಕೆ ಹೋಗುವಾಗ ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕುಂದಗೋಳ ಕ್ರಾಸ್ ಕೆಳಗೆ ಟ್ರ್ಯಾಕ್ಟರ್ ಪಲ್ಟಿಯಾದ ಅಪಘಾತದ ಕಹಿ ಘಟನೆ ಮರೆತಿಲ್ಲ.
ಇನ್ನೂ ಬೇರೆ ವಾಹನಗಳಿಂದ ಹುಬ್ಬಳ್ಳಿಗೆ ಹತ್ತಿ ಸಾಗಿಸಲು ವಾಹನದ ಸಮಸ್ಯೆ ಜೊತೆ ಕೂಲಿಕಾರರ ಅಲಭ್ಯತೆ ಮತ್ತು ಹುಬ್ಬಳ್ಳಿ ಲಕ್ಷ್ಮೇಶ್ವರ ರಸ್ತೆಗೆ ಟೋಲ್ ಹಣ ಪಾವತಿ ಮಾಡಿ, ಮಾರುಕಟ್ಟೆಯಲ್ಲಿ ತಮ್ಮ ಸರದಿ ಬರೋ ವರೆಗೂ ಕಾಯ್ಬೇಕು.
ಈ ಎಲ್ಲ ಪರಿಸ್ಥಿತಿಗಳಿಂದ ಬೇಸತ್ತ ರೈತರು ಕುಂದಗೋಳದಲ್ಲೇ ಮುಂಗಾರಿನ ಶೇಂಗಾ ಮತ್ತು ಹತ್ತಿ ಖರೀದಿ ಕೇಂದ್ರ ಆರಂಭಕ್ಕೆ ಮೋರೆ ಇಡುತ್ತಿದ್ದಾರೆ.
Kshetra Samachara
25/11/2020 05:31 pm