ಕುಂದಗೋಳ : ರೈತಾಪಿ ವರ್ಗದ ರೊಕ್ಕದ ಬೆಲೆಗಳಲ್ಲಿ ಒಂದಾದ ಈರುಳ್ಳಿ ಬೆಲೆ ಸದ್ಯ ಪರಿಸ್ಥಿತಿಯಲ್ಲಿ ಈರುಳ್ಳಿ ಹೆಸರು ಕೇಳಿದ್ರೆ ಸಾಕು ಕಣ್ಣಲ್ಲಿ ನೀರು ಬರೋ ಮಟ್ಟಿಗೆ ಬೆಲೆ ಏರಿಕೆ ಕಂಡಿದ್ದು ಕಾಶ್ಮಿರಿ ಆಪಲ್ ಬೆಲೆಗೆ ಪೈಪೂಟಿ ನೀಡುತ್ತಿದೆ ಆದ್ರೇ ಈ ಬಯಲು ಸೀಮೆ ಈರುಳ್ಳಿ ಮಾರುಕಟ್ಟೆಗೆ ಬಂದ್ರೇ ಬೆಲೆ ಇಳಿಕೆಯಾಗಬಹುದು ? ಮಾತು ಹುಸಿಯಾಗುವ ಲಕ್ಷಣ ಕಾಣುತ್ತಿಲ್ಲ.
ಕುಂದಗೋಳ ತಾಲೂಕಿನಲ್ಲಿ ಬೆಳೆದ ಈರುಳ್ಳಿ ಬೆಳೆ ಅತಿವೃಷ್ಟಿಗೆ ಹಾಳಾಗಿದ್ದು ಇಷ್ಟೋತ್ತಿಗೆ ಮಾರ್ಕೇಟ್ ಸೇರಿ ಮಾರಾಟವಾಗಬೇಕಾದ ಈರುಳ್ಳಿ ಇನ್ನು ರೈತರ ಕಣ ಕಟ್ಟೇಗಳಲ್ಲಿ ಬಿಸಿಲಿಗೆ ಮೈಯೊಡ್ಡಿದೆ ಈಗಾಗಲೇ ಅತಿವೃಷ್ಟಿ ಪರಿಣಾಮ ಅರ್ಧ ಕೆಟ್ಟು ಇನ್ನರ್ಧ ಉಳಿಸಿಕೊಂಡಿರುವ ಈರುಳ್ಳಿಯನ್ನ ರೈತ ಮಾರುಕಟ್ಟೆ ತರುವ ಮಾತು ದೂರಾಗಿದ್ದು ಹಳ್ಳಿಗರು ಕೇಳಿದ ಬೆಲೆ ಕಣ ಕಟ್ಟೇಗಳಲ್ಲೇ ರೈತಾಪಿ ಕುಟುಂಬಗಳಿಗೆ ಮಾರಾಟ ಮಾಡುತ್ತಿದ್ದಾರೆ.
ಮಾರುಕಟ್ಟೆಯಲ್ಲಿ 120 ರೂಪಾಯಿ ಮೌಲ್ಯದಿಂದ 90 ರೂಪಾಯಿ ವರೆಗೂ ಬೆಲೆ ಹೊಂದಿರುವ ಈರುಳ್ಳಿ ಗುಣಮಟ್ಟಕ್ಕೆ ಹೋಲಿಸಿದರೆ ಬಯಲುಸೀಮೆ ಈರುಳ್ಳಿ ಅತಿವೃಷ್ಟಿಗೆ ಸಿಲುಕಿ ಕಳಪೆಯಾಗಿದ್ದು ಅರ್ಧ ಬೆಲೆಗೆ ಮಾರುವುದೇ ಹೆಚ್ಚು ಈ ಕಾರಣ ರೈತರು ಈರುಳ್ಳಿ ನಿರ್ವಹಣೆಯಲ್ಲಿ ತೊಡಗಿದ್ದು ಚೀಲ ತುಂಬಿ ಎಪಿಎಂಸಿ ಮೆಟ್ಟಿಲು ಹತ್ತದೆ ಸಂತೆ, ಪ್ಯಾಟಿ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದು ಈ ಬಗ್ಗೆ ಮಾತನಾಡಲು ಮುಂದೆ ಬರುತ್ತಿಲ್ಲ.
Kshetra Samachara
06/11/2020 02:53 pm