ಧಾರವಾಡ: ಮರದ ಮೇಲಿಂದ ಬಿದ್ದು ಗಂಭೀರ ಗಾಯವಾಗಿ ಹೊಟ್ಟೆ ಹರಿದುಕೊಂಡಿದ್ದ ಕೋತಿಗೆ ಧಾರವಾಡದಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.
ನವಲೂರು ರೈಲ್ವೆ ನಿಲ್ದಾಣದ ಬಳಿಯ ಮರದ ಮೇಲಿಂದ ಬಿದ್ದಿದ್ದ ಕೋತಿಗೆ ಹೊಟ್ಟೆಗೆ ಬಲವಾದ ಪೆಟ್ಟಾಗಿತ್ತು. ಕರುಳು ಹೊರಗೆ ಬಂದು ತೀವ್ರ ರಕ್ತಸ್ರಾವವಾಗಿ, ಕೋತಿ ಸಾವಿಗೆ ಅಂಚಿಗೆ ತಲುಪಿತ್ತು.
ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ವನ್ಯಜೀವಿ ಸಂರಕ್ಷಕ ಸೋಮಶೇಖರ ಚನ್ನಶೆಟ್ಟಿ ಹಾಗೂ ತಂಡದವರು ಆ ಮರ್ಕಟವನ್ನು ಹಿಡಿದುಕೊಂಡು ಪಶು ವೈದ್ಯ ಡಾ.ವಿನೀತ ಅವರಲ್ಲಿಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ.
ಡಾ.ವಿನೀತ ಅವರು ಆ ಕೋತಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಚೇತರಿಕೆ ನಂತರ ಕೋತಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.
Kshetra Samachara
26/06/2022 02:52 pm