ಕುಂದಗೋಳ : ನಿನ್ನೆ ರಾತ್ರಿ ಶರೇವಾಡ ಟೋಲ್ ಗೇಟ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ಕೇಳಿ ಅದೆಷ್ಟೂ ಜನರ ಕರುಳು ಚುರ್ ಎಂದಿದೆ ಬಾಳಿ ಬೆಳಕಾಗಬೇಕಾದ ಜೀವಗಳು ಅಗಲಿ ಹೋಗಿವೆ.
ಆದರೆ ಆ ಅಪಘಾತದಲ್ಲಿ ಮಡಿದ ಸ್ನೇಹಿತರಿಬ್ಬರ ಗೆಳೆತನ ಸಾವಿನಲ್ಲೂ ಒಂದಾದ ಈ ಸ್ನೇಹ ನೋಡಿ ಇಡೀ ಕುಂದಗೋಳ ಪಟ್ಟಣವೇ ಕಂಬನಿ ಮಿಡಿದಿದೆ.
ಅಪಘಾತಕ್ಕೆ ಸಿಲುಕಿ ಮೃತರಾದ ಇಮ್ರಾನ್ ಹುಬ್ಬಳ್ಳಿ ಹಾಗೂ ಮೈನು ಮಿಶ್ರಿಕೋಟಿ ಪರಸ್ಪರ ಸ್ನೇಹಿತರು ಅದೇಷ್ಟರ ಮಟ್ಟಿಗೆ ಎಂದ್ರೇ ಒಬ್ಬರನ್ನು ಬಿಟ್ಟು ಒಬ್ಬರೂ ಎಂದಿಗೂ ಅಗಲಿ ಇರುತ್ತಿರಲಿಲ್ಲ ಇವರಿಬ್ಬರ ಗೆಳೆತನಕ್ಕೆ ಸಾಟಿ ಇರಲಿಲ್ಲ ಎನ್ನುವಂತೆ ಇತ್ತು ಇವರ ದೋಸ್ತಿ.
ಅದ್ಯಾವ ಕಟ್ಟು ಕಣ್ಣು ಬಿತ್ತೊ ಗೊತ್ತಿಲ್ಲ ಪ್ರಾಣ ಸ್ನೇಹಿತರು ಸಾವಿನಲ್ಲೂ ಒಂದಾಗಿದ್ದಾರೆ.
ನಿನ್ನೆ ರಾತ್ರಿ ಶರೇವಾಡ ಟೋಲ್ ಗೇಟ್ ಬಳಿ ಮೃತಪಟ್ಟ ಇವರನ್ನು ಕುಂದಗೋಳ ಪಟ್ಟಣದ ಮುಸ್ಲಿಂ ಸಮುದಾಯದವರು ಇಬ್ಬರ ಜನಜಾವನ್ನು ಒಟ್ಟಿಗೆ ತೆಗೆದುಕೊಂಡು ಹೋಗಿ ಪ್ರಾರ್ಥನೆ ಮಾಡಿ ಅಂತ್ಯಕ್ರಿಯೆ ನೆರವೇರಿಸಿದರು.
ಈ ಅಂತ್ಯಕ್ರಿಯೆಲ್ಲಿ ಪಾಲ್ಗೊಂಡ ಜನಸಾಗರದ ಕಂಗಳಲ್ಲಿ ನೋವು ಎದ್ದು ತೋರುತ್ತಿದ್ದರೂ ಸಾವಿನಲ್ಲೂ ಒಂದಾದ ಗೆಳೆತನಕ್ಕೆ ಇಡೀ ಕುಂದಗೋಳ ಪಟ್ಟಣವೇ ಮೌನವಾಗಿತ್ತು.
Kshetra Samachara
23/02/2021 08:16 pm