ಶಿವಮೊಗ್ಗ: ಇದೇ ಜನವರಿ ಹುಬ್ಬಳ್ಳಿಯ ಬೈಪಾಸ್ ನಲ್ಲಿ ನಡೆದಿದ್ದ ರಣಭೀಕರ ಅಪಘಾತದಲ್ಲಿ ಸ್ಥಳದಲ್ಲೇ 11 ಜನ ಮೃತಪಟ್ಟಿದ್ದರು. ಐವರು ಗಂಭೀರವಾಗಿ ಗಾಯಗೊಂಡಿದ್ದರು.
ಇದರಲ್ಲಿ ವೇದಾ ಎಂಬುವರು ಬೆಂಗಳೂರಿನ ಖಾಸಗೀ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡಿ ಇಂದು ಮೃತಪಟ್ಟಿದ್ದಾರೆ. ಆದ್ರೆ ಮೃತ ವೇದಾ ಅವರು ಸಾವಿನಲ್ಲೂ ಸಾರ್ಥಕತೆ ತೋರಿದ್ದಾರೆ.
ವೇದಾ ಅವರ ಇಚ್ಛೆಯಂತೆ ಕುಟುಂಬಸ್ಥರು ಲಿವರ್ ಹಾಗೂ ಎರಡೂ ಕಿಡ್ನಿಗಳನ್ನು ದಾನ ಮಾಡಿದ್ದಾರೆ. ಈ ಮೂಲಕ ಸಾರ್ಥಕ ಸಾವು ಕಂಡಿದ್ದಾರೆ.
Kshetra Samachara
24/01/2021 08:16 pm