ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಜೀವರಕ್ಷಕ ಈ ನಿಂಗಪ್ಪ

ಹುಬ್ಬಳ್ಳಿ- ಪೇಡಾ ನಗರಿ ಧಾರವಾಡದಲ್ಲಿ ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದ್ದಿದ್ದಾನೆ.‌ ಗೋವಾಗೆ ಎಂಜಾಯ್ ಮಾಡಲು ಹೊರಟ್ಟಿದ್ದ 18 ಜನರಲ್ಲಿ ದಾವಣಗೆರೆಯ 11 ಜನರು ಅಸುನೀಗಿದ್ದಾರೆ. ಇನ್ನು ಅಪಘಾತವಾದ ಸ್ಥಳಕ್ಕೆ ಭೇಟಿ ನೀಡಿದ್ದ ಆ ವ್ಯಕ್ತಿ ಕೆಲವರ ಜೀವ ಉಳಿಸಿ ದೇವರಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದವರನ್ನು ಆಸ್ಪತ್ರೆಗೆ ರವಾನಿಸಿ ಪ್ರಾಣ ಉಳಿಸಿದ್ದಾನೆ. ಅಷ್ಟಕ್ಕೂ ಯಾರು ಆ ಜೀವ ರಕ್ಷಕ ಅಂತೀರಾ ಈ ಸ್ಟೋರಿ ನೋಡಿ...

ಧಾರವಾಡದ ಈಟಿಗಟ್ಟಿ ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ ನಿನ್ನೆ ಮೃತಕೂಪವಾಗಿ ಪರಿವರ್ತನೆಗೊಂಡಿತ್ತು. ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸಕ್ಕೆ 11 ಜನರು ಅಪಘಾತದಲ್ಲಿ ಅಸುನೀಗಿದ್ದಾರೆ. ಕುಟುಂಬಸ್ಥರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಕೆಲವರು ಅಪಘಾತದಲ್ಲಿ ವ್ಯಕ್ತಿಯೋರ್ವನ ಸಮಯ ಪ್ರಜ್ಞೆಯಿಂದ ಬದುಕುಳಿದ್ದಾರೆ. ಎಂಟು ಜನರ ಪಾಲಿಗೆ ದೇವರಾಗಿ ಬಂದಿದ್ದ ಆ ವ್ಯಕ್ತಿ, ಎಂಟು ಜನರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನಿಸಿ ಜೀವದಾನ ಮಾಡಿದ್ದಾನೆ. ಎಸ್. ಹೀಗೆ‌ ದೃಶ್ಯಗಳಲ್ಲಿ ದಪ್ಪ ಮಿಸೆ ಬಿಟ್ಟುಕೊಂಡು ನಿಂತಿರೋ ಈ ವ್ಯಕ್ತಿಯ ಹೆಸರು ನಿಂಗಪ್ಪ, ಅವರೇ ಅಪಘಾತದಲ್ಲಿ ಎಂಟು ಜನರ ಪ್ರಾಣ ಉಳಿಸಿದ ಪುಣ್ಯಾತ್ಮ.‌ ನಿಂಗಪ್ಪ ಕಳೆದ ಹಲವು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಮೇಲೆ ಆಗುವ ಅಪಘಾತಗಳಲ್ಲಿ ಜನರನ್ನು ಉಳಿಸುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಹೆದ್ದಾರಿಯಲ್ಲಿ ಯಾವುದೇ ಅಪಘಾತ ಆದ್ರೆ ಸಾಕು ನಿಂಗಪ್ಪ ಅಲ್ಲಿ ಎಂಟ್ರಿ‌ ಕೊಟ್ಟಿರ್ತಾನೆ. ಅಲ್ಲದೇ ಯಾರಾದರೂ ಅಪಘಾತಗಳನ್ನು ಕಂಡರೆ ಕೂಡಲೇ ನಿಂಗಪ್ಪನಿಗೆ ಸುದ್ದಿ ಮುಟ್ಟಿಸುತ್ತಾರೆ. ಹೀಗಾಗಿ ಎಂದಿನಂತೆ ನಿಂಗಪ್ಪನಿಹೆ ಅಪಘಾತದ ಮಾಹಿತಿ ಬಂದಿದೆ. ಕೂಡಲೇ ನಿಂಗಪ್ಪ ತನ್ನ ಕಾರು ಹತ್ತಿ ಅಪಘಾತ ಸ್ಥಳಕ್ಕೆ ದೌಡಾಯಿಸಿದ್ದಾನೆ. ಆದ್ರೆ ಈ ಬಾರಿಯ ಅಪಘಾತ ನಿಂಗಪ್ಪನನ್ನೇ ಆಘಾತಗೊಳಿಸಿದೆ.

ಧಾರವಾಡ ತಾಲೂಕಿನ ನುಗ್ಗಿಕೇರಿ ಗ್ರಾಮದ ನಿಂಗಪ್ಪ, ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಆಗಿರೋ 200 ಕ್ಕೂ ಹೆಚ್ಚು ಅಪಘಾತ ಪ್ರಕರಣಗಳಲ್ಲಿ 60 ಕ್ಕೂ ಹೆಚ್ಚು ಜನರ ಪ್ರಾಣ ಉಳಿಸಿದ್ದಾನೆ. ಗ್ರಾಮದ ಹತ್ತಿರವೇ ಇರುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಆಗದ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಪಘಾತಗಳು ಆಗುತ್ತಿವೆ. ಹೀಗಾಗಿ ನಿಂಗಪ್ಪ ತನ್ನ ದೈನಂದಿನ ಕಾರ್ಯದ ಜೊತೆಗೆ ಸಮಾಜ ಸೇವೆ ಎಂದುಕೊಂಡು ತನ್ನದೇ ಕಾರಿನಲ್ಲಿ ಅಪಘಾತಕ್ಕೊಳಗಾದ ಜನರಿಗೆ ಸಹಾಯ ಮಾಡುತ್ತ ಮಾನವೀಯತೆ ಮೆರೆಯುತ್ತಿದ್ದಾನೆ.‌...!

Edited By : Nagesh Gaonkar
Kshetra Samachara

Kshetra Samachara

16/01/2021 06:01 pm

Cinque Terre

128.15 K

Cinque Terre

64

ಸಂಬಂಧಿತ ಸುದ್ದಿ