ಧಾರವಾಡ : ನಗರದ ಮಾಳಮಡ್ಡಿಯ ಪ್ರತಿಮಾ ಅಪಾರ್ಟ್ಮೆಂಟ್ ತಿರುವಿನಲ್ಲಿ ಸಾರಿಗೆ ಸಂಸ್ಥೆಯ ಬಸ್ ಹಾಯ್ದ ಪರಿಣಾಮ ಎರಡು ತಿಂಗಳ ಆಕಳ ಕರು ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ. ಈ ದೃಶ್ಯ ನೋಡಿದ ತಾಯಿ ಆಕಳ ಮೂಕ ರೋದನೆ ಹೇಳ ತೀರದ್ದಾಗಿತ್ತು.
ಬಸ್ ಡಿಕ್ಕಿ ಹೊಡೆದ ರಭಸಕ್ಕೆ ತಾಯಿ ಮುಂದೆ ಕರು ಪ್ರಾಣ ಬಿಟ್ಟಿತು.ಕೆಲ ಕಾಲ ಕರು ಮುಂದೆ ನಿಂತ ಆಕಳ ಮೂಖ ರೋದನೆಯಿಂದ ಸ್ಥಳೀಯರು ಮಮ್ಮಲ ಮರುಗುವಂತೆ ಮಾಡಿತ್ತು.
ಆಕಳ ಕಣ್ಣೀರು ನೋಡಿ ಸ್ಥಳೀಯರು ಕರುವನ್ನು ಬದುಕಿಸಲು ಎಷ್ಟೇ ಪ್ರಯತ್ನ ಮಾಡಿದ್ರೂ ಸಹ ಫಲಕಾರಿಯಾಗಲಿಲ್ಲ. ಕೊನೆಗೆ ಸಂಚಾರಿ ಪೊಲೀಸರು ಹಾಗೂ ಸ್ಥಳೀಯ ಯುವಕರು ಸೇರಿ ರೈಲ್ವೆ ನಿಲ್ದಾಣದ ತೋಪಿನಲ್ಲಿ ಅಂತ್ಯಕ್ರಿಯೆ ನೇರವೇರಿಸಿದ್ದಾರೆ.ಅಂತ್ಯಕ್ರಿಯೆ ಮುಗಿಯುವವರೆಗೂ ತಾಯಿ ಆಕಳು ಜಾಗ ಬಿಟ್ಟು ಕದಲ್ಲಿಲ.
Kshetra Samachara
23/11/2020 12:52 pm