ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿಯಲ್ಲಿ ನಿರಂತರವಾಗಿ ಸುರಿದ ಮಳೆಗೆ ಮನೆಯ ಮೇಲ್ಛಾವಣಿ ಕುಸಿತ. ಮರುಜನ್ಮ ಪಡೆದ ವೃದ್ಧೆ

ಅಣ್ಣಿಗೇರಿ : ಪಟ್ಟಣದಲ್ಲಿ ಕಳೆದ ಐದಾರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಹೊಲಗದ್ದೆಗಳು ಮಾತ್ರವಲ್ಲದೇ ಮನೆಗಳು ಹಾಳಾಗಿ ಲಕ್ಷಾಂತರ ಮೌಲ್ಯದ ಹಾನಿಯುಂಟಾದ ಘಟನೆಗಳು ಪ್ರತಿನಿತ್ಯ ಸಂಭವಿಸುತ್ತಿವೆ.

ಹೌದು ಪಟ್ಟಣದ ಹೊರಕೇರಿ ಓಣಿಯ 80 ರ ವೃದ್ಧೆ ಗುರುವಾರ ಮಧ್ಯಾಹ್ನ ಮನೆಯಲ್ಲಿ ಒಬ್ಬಳೆ ಮಲಗಿದ್ದಾಗ ತಾನು ಮಲಗಿದ್ದ ಮನೆಯ ಮೇಲ್ಛಾವಣಿ ಕುಸಿದು ಅದರಡಿಯಲ್ಲಿ ಸಿಲುಕಿ ದೇವರ ದಯೆಯಿಂದ ಪುನರ ಜನ್ಮ ಪಡೆದ ಘಟನೆ ನಡಿದಿದೆ.

ಮಣ್ಣಿನಡಿಯಲ್ಲಿ ಸಿಲುಕಿದ ವೃದ್ಧೆ ಶಾರಮ್ಮ ಕುರಹಟ್ಟಿ ಗೆ ತಲೆಗೆ ಹಾಗೂ ಕೈ.ಕಾಲುಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕೂಡಲೇ ಸ್ಥಳದಲ್ಲಿದ್ದ ಸ್ಥಳೀಯ ರು ಮಣ್ಣಿನ ಕೆಳಭಾಗದಲ್ಲಿ ಸಿಲುಕಿದ್ದ ಶಾರಮ್ಮಳನ್ನು ರಕ್ಷಿಸಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗೆ ದಾಖಲಿಸಿದ್ದಾರೆ.

Edited By :
Kshetra Samachara

Kshetra Samachara

15/10/2020 10:12 pm

Cinque Terre

25.2 K

Cinque Terre

1

ಸಂಬಂಧಿತ ಸುದ್ದಿ