ಹುಬ್ಬಳ್ಳಿ: ಇಂಡಿಯಾ ಬುಕ್ ಆಫ್ ರೆಕಾರ್ಡ್, ಇಂಡಿಯಾ ಗಾಟ್ ಟಾಲೆಂಟ್ ಮೂಲಕ ಸಾಕಷ್ಟು ಸಾಧನೆ ಮಾಡಿರುವ ಹುಬ್ಬಳ್ಳಿಯ ಬಾಲಕ ಆರ್ಯನ್ ಕಿರಣ ಶೆಟ್ಟರ್ ಈಗ ಮತ್ತೊಂದು ಗೌರವ ಸ್ಥಾನ ಪಡೆಯುವ ಮೂಲಕ ಹುಬ್ಬಳ್ಳಿಯ ಕೀರ್ತಿಯನ್ನು ಹೆಚ್ಚಿಸಿದ್ದಾನೆ.
ಹೌದು.. ಮೊನ್ನೆಯಷ್ಟೇ ಚಲನಚಿತ್ರೋತ್ಸವ ಸಮಾರಂಭವೊಂದರಲ್ಲಿ ರಾಜನಕ್ಷತ್ರ ಪ್ರಶಸ್ತಿ ಪಡೆದಿದ್ದ ಬಾಲಕ ಈಗ ಅಂತರಾಷ್ಟ್ರೀಯ ಮಟ್ಟದ ಶಿಶು ಉಲ್ಲಾಸ ಸಂಸ್ಥೆಯ ಡೈರೆಕ್ಟರ್ ಆಗಿ ಆಯ್ಕೆಯಾಗುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾನೆ. ಶಿಶು ಉಲ್ಲಾಸ, ಇದೊಂದು ಅಂತರಾಷ್ಟ್ರೀಯ ಮಟ್ಟದ ಯುವ ಸಮುದಾಯದ ಅಭಿವೃದ್ಧಿಗೆ ಪೂರಕವಾದ ಸಂಸ್ಥೆಯಾಗಿದ್ದು, ಇಂತಹದೊಂದು ಸಂಸ್ಥೆಗೆ ಕಿರಿಯ ವಯಸ್ಸಿನ ಆರ್ಯನ್ ಕಿರಣ ಶೆಟ್ಟರ್ ಡೈರೆಕ್ಟರ್ ಆಗಿ ಆಯ್ಕೆಯಾಗಿರುವುದು ವಿಶೇಷವಾಗಿದೆ.
ಇನ್ನೂ ಹುಬ್ಬಳ್ಳಿಯ ಕಿರಣ ಶೆಟ್ಟರ್, ನೀಲಾಂಬಿಕ ಶೆಟ್ಟರ್ ಪುತ್ರನಾಗಿದ್ದು, ಚಿನ್ಮಯ ವಿದ್ಯಾಲಯದಲ್ಲಿ ನಾಲ್ಕನೇ ತರಗತಿ ಓದುತ್ತಿದ್ದಾನೆ. ಪಬ್ಲಿಕ್ ನೆಕ್ಸ್ಟ್ ಈ ಹಿಂದೆಯೇ ಪ್ರತಿಭೆಯನ್ನು ಸಮಾಜದ ಮುಖ್ಯವಾಹಿನಿಗೆ ಪರಿಚಯಿಸಿತ್ತು. ಈಗ ಇಂತಹದೊಂದು ಮಹತ್ವದ ಸಾಧನೆಗೆ ಮುಂದಾಗಿರುವುದು ಹುಬ್ಬಳ್ಳಿಯ ಕೀರ್ತಿಯನ್ನು ಹೆಚ್ಚಿಸಿದೆ.
Kshetra Samachara
07/02/2024 01:15 pm