ಹುಬ್ಬಳ್ಳಿ: ಕಳೆದ ಹಲವಾರು ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಶಿಕ್ಷಣ ಪ್ರೇಮಿ ಖ್ಯಾತ ಉದ್ಯಮಿ ಡಾ.ವಿ.ಎಸ್.ವಿ.ಪ್ರಸಾದ್ ಜನ್ಮದಿನ ನಿಮಿತ್ತವಾಗಿ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ಪ್ರಾಥಮಿಕ ನಂಬರ್ 19 ಇಂಡಿಪಂಪ್ ಹಳೆ ಹುಬ್ಬಳ್ಳಿ ಶಾಲೆಗೆ ನೀರಿನ ಫಿಲ್ಟರ್, 4 ಸಿಸಿ ಕ್ಯಾಮೆರಾ ಒಂದು ಕಂಪ್ಯೂಟರ್ ಮತ್ತು ಪ್ರಿಂಟರ್, 10 ವೈಟ್ ಬೋರ್ಡ್ ಶಾಲೆಗೆ ಕೊಡೆಗೆ ನೀಡಿದ್ದು, ಆರ್ ಓ ವಾಟರ್ ಪ್ಲಾಂಟ್ ಉದ್ಘಾಟನೆ ಮಾಡಿದರು.
ಶಾಲಾ ಮುಖ್ಯೋಪಾಧ್ಯಾಯ ಹನಮಂತಪ್ಪ ಕುಂದರಗಿ, ಶಿಕ್ಷಕರು ಹಾಗೂ ಸಿಬ್ಬಂದಿ ಡಾ.ವಿ.ಎಸ್.ವಿ.ಪ್ರಸಾದ ಅವರಿಗೆ ಸನ್ಮಾನಿಸಿ ಗೌರವ ನೀಡಿದರು.
ಡಾ.ವಿ.ಎಸ್.ವಿ.ಪ್ರಸಾದ್ ಅವರು ಮಾತನಾಡಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಸ್ಮಾರ್ಟ್ ಕ್ಲಾಸ್ ಶಿಕ್ಷಣ ಒದಗಿಸಲು ಕಂಪ್ಯೂಟರ್ ಮತ್ತು ಪೀಠೋಪಕರಣಗಳು ಸಾಮಾಗ್ರಿಗಳನ್ನು ನೀಡಲಾಗಿದೆ. ಇದರ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಶಿಕ್ಷಕರ ಸಹಾಯದಿಂದ ಪಡೆಯಲಿ ಎಂದು ತಿಳಿಸಿದರು.
ನಾನು ಶಾಲೆಗೆ ಹೋಗಿ ಒಳ್ಳೆ ಶಿಕ್ಷಣ ಪಡೆದು ಈ ಮಟ್ಟಕ್ಕೆ ನಿಂತಿದ್ದೇನೆ. ನೀವು ಉತ್ತಮ ಶಿಕ್ಷಣ ಪಡೆದು ಈ ದೇಶದ ಪ್ರಜೆಯಾಗಬೇಕು ಎಂದು ತಿಳಿಸಿದರು. ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡರು. ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿರುವ ಡಾ.ಬಿ.ಆರ್.ಅಂಬೇಡ್ಕರ್, ಎಪಿಜೆ ಅಬ್ದುಲ್ ಕಲಾಂ ಅವರು ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದ್ದಾರೆ. ಅವರನ್ನು ನೋಡಿದರೆ ಅದ್ಬುತ ಕನಸುಗಳು ಹುಟ್ಟಿಕೊಳ್ಳಬೇಕು.
ಅಂತಹ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಉತ್ಸುಕತೆ ಹೆಚ್ಚಾಗಬೇಕು. ಸರಕಾರಿ ಶಾಲೆಯ ಮಕ್ಕಳು ಇತಿಹಾಸವನ್ನು ಸೃಷ್ಟಿಸುವ ಮತ್ತು ಒಳ್ಳೆಯ ಸಮಾಜ ನಿರ್ಮಾಣ ಮಾಡುವ ಶಕ್ತಿ ಇದೆ. ಇಂದಿನ ಮಕ್ಕಳು ನಾಳಿನ ಪ್ರಜೆಗಳು ಎಂದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಹನಮಂತಪ್ಪ ಕುಂದರಗಿ, ವೆಂಕಟೇಶ್ ಲುಟಗಿ, ಮಾಜಿ ಸಿಂಡಿಕೆಟ್ ಸದಸ್ಯ ಸುಭಾಸಿಂಗ್ ಜಮಾದರ, ಬಿಜೆಪಿ ಹು-ಧಾ ಪೂರ್ವ ಕ್ಷೇತ್ರದ ವಕ್ತಾರ ಲಕ್ಷ್ಮೀಕಾಂತ ಘೋಡಕೆ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕಾಟಕರ, ತೋಟಪ್ಪ ನೀಡಿಗುಂದಿ, ಸಮತಾ ಸೇನಾ ರಾಜ್ಯಾಧ್ಯಕ್ಷ ಗುರುನಾಥ್ ಉಳ್ಳಿಕಾಶಿ, ರವಿ ಬಂಕಾಪುರ್, ಮಂಜುನಾಥ ವದ್ದಿ, ರವಿ ಯಾವಗಲ್ ನಾರಾಯಣ ಪಾಂಡುರಂಗ, ಶಾಲಾ ಶಿಕ್ಷಕರು, ಸಿಬ್ಬಂದಿ ಮತ್ತು ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/01/2025 10:37 am