ಕಲಘಟಗಿ:ತಾಲೂಕಿನ ಹಿರೆಹೊನ್ನಿಹಳ್ಳಿ ಗ್ರಾಮದಲ್ಲಿ ಶೀಗೆ ಹುಣ್ಣಿಮೆ ನಿಮಿತ್ಯ ಕೋಲಾಟ ಆಡುವ ಸಂಪ್ರದಾಯ ನಡೆದು ಬಂದಿರುವುದು ಬಹು ವಿಶೇಷ.
ಇತ್ತಿತ್ತಲಾಗಿ ಕಣ್ಮರೆಯಾಗುತ್ತಿರುವ ಕೋಲಾಟ ಜಾನಪದ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಹಿರೆಹೊನ್ನಿಹಳ್ಳಿ ಗ್ರಾಮದ ಹಿರಿಯರು ಮಾದರಿಯಾಗಿದ್ದಾರೆ.
ಪ್ರತಿವರ್ಷ ಶೀಗೆ ಹುಣ್ಣಿಮೆ ದಿನದಂದು ಜನಪ್ರಿಯ ಜಾನಪದ ಕೋಲಾಟವನ್ನು ಆಡುವ ಪದ್ಧತಿ ಗ್ರಾಮದಲ್ಲಿ ನಡೆದು ಬಂದಿದ್ದು,ಗ್ರಾಮದ ಹಿರಿಯರು ಕಿರಿಯರಿಗೆ ಕೋಲಾಟ ಹಾಗೂ ಕೋಲಾಟದ ಪದಗಳನ್ನು ಕಲಿಸುತ್ತಾ ಕಲೆಯನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡುತ್ತಿದ್ದಾರೆ.
ಹಳೆ ಬೇರು ಹೊಸ ಚಿಗರು ಎಂಬಂತೆ ಹಿರಿಯರು ಕೋಲಾಟವನ್ನು ಯುವಕರಿಗೆ ಕಲಿಸುವ ಮೂಲಕ ಜಾನಪದ ಸಂಸ್ಕ್ರತಿಯನ್ನು ಉಳಿಸುವ ಕೆಲಸ ಮಾಡಿರುವುದು ಶ್ಲಾಘನೀಯವಾಗಿದೆ.
ಈ ಬಾರಿ ಹಿರಿಯರೇ ಹೆಜ್ಜೆ ಹಾಕಿ ಜಾನಪದ ಕಲೆಯಾದ ಕೋಲಾಟಕ್ಕೆ ಮೆರಗು ಹೆಚ್ಚಿಸಿ ಗ್ರಾಮಸ್ಥರನ್ನು ರಂಜಿಸಿದ್ದು ವಿಶೇಷವಾಗಿತ್ತು.
Kshetra Samachara
30/10/2020 10:45 pm