ಹುಬ್ಬಳ್ಳಿ- ಹೀಗೆ ಮಂಗಳ ಮುಖಿಯರಿಗೆ ಆರೋಗ್ಯ ತಪಾಸಣೆ ಜೊತೆಗೆ ಆಹಾರ ಕಿಟ್ ನೀಡುತ್ತಿರುವ, ಈ ಸಂಸ್ಥೆ ಹೆಸರು ಹುಬ್ಬಳ್ಳಿ ರೌಂಡ್ ಟೇಬಲ್ ಲೇಡಿಸ್ ಸರ್ಕಲ್ 65....... ಕೊರೊನಾ ಸಂದರ್ಭದಲ್ಲಿ ನಿರ್ಗತಿಕ ಮಂಗಳಮುಖಿಯರ ಸ್ಥಿತಿಯನ್ನರಿತು, ಅವರಿಗೆ ಒಂದು ತಿಂಗಳಿಗೆ ಆಗುವಂತೆ, ದಿನಬಳಕೆಯ ಅಗತ್ಯ ವಸ್ತುಗಳನ್ನು ವಿತರಿಸುವ ಮೂಲಕ ಮಂಗಳ ಮುಖಿಯರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ......
ಇನ್ನು ಮಂಗಳಮುಖಿಯರು ಬಿದಿ ಬದಿಗಳಲ್ಲಿ ಸಂಚರಿಸಿ, ಭಿಕ್ಷಾಟನೆಯೆ ಮಾಡಿ ತಮ್ಮ ಜೀವನವನ್ನು ನಡೆಸುತ್ತಿದ್ದರು. ಮಹಾಮಾರಿ ಕೋವಿಡ್ -19 ತಡೆಗಟ್ಟಲು ಕೇಂದ್ರ ಸರ್ಕಾರವು ಇಡೀ ದೇಶ ಲಾಕ್‌ಡೌನ್ ಮಾಡಿದ ಪರಿಣಾಮ, ಭಿಕ್ಷಾಟನೆಯೆ ಮಾಡಿ ಜೀವ ನಡೆಸುತ್ತಿದ್ದ ಈ ಮಂಗಳಮುಖಿಯರಿಗೆ ಒಪ್ಪೊತ್ತಿನ ಊಟಕ್ಕೂ ಇಲ್ಲದೇ ಇರುವುದು ಕಂಡು, ಹಲವು ಸಂಘ ಸಂಸ್ಥೆಗಳು ಇವರಿಗೆ ಸಹಾಯ ಮಾಡಿವೆ...
Kshetra Samachara
29/10/2020 08:58 pm