ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ವಿಶೇಷ ಚೇತನರಿಗೆ ನೆರವಾದ ಸಮರ್ಥನಂ ಸಂಸ್ಥೆ

ಧಾರವಾಡ : ಕೊರೊನಾ ಮಧ್ಯೆ ಸಾಲು ಸಾಲು ಹಬ್ಬಗಳು ಬರುತ್ತಿರುವುದರಿಂದ ಹಬ್ಬಗಳ ಆಚರಣೆ ದುಸ್ತರವಾಗಬಹುದು ಎಂದು ಧಾರವಾಡ ಸಮರ್ಥನಂ ಅಂಗವಿಕಲರ ಸಂಸ್ಥೆಯು ಧಾರವಾಡದ ಅನೇಕ ವಿಶೇಷ ಚೇತನರಿಗೆ ದಿನಸಿ ಕಿಟ್ ಸೇರಿದಂತೆ ಇತರ ವಸ್ತುಗಳ ಕಿಟ್ ನೀಡುವ ಮೂಲಕ ಅಂಗವಿಕಲರ ಕುಟುಂಬಕ್ಕೆ ನೆರವಾಗಿದೆ.

ಸಮರ್ಥನಂ ಅಂಗವಿಕಲರ ಸಂಸ್ಥೆಯು ಈಗಾಗಲೇ ಧಾರವಾಡ ಶಾಖೆ ಒಂದರಲ್ಲೇ 180 ಜನ ವಿಶೇಷ ಚೇತನರಿಗೆ ಆಸರೆ ನೀಡಿದ್ದು, ಇದರ ಮಧ್ಯೆ ಧಾರವಾಡ ಸೇರಿದಂತೆ ಅನೇಕ ಕಡೆಗಳಲ್ಲಿನ ಸುಮಾರು 750 ವಿಶೇಷ ಚೇತನರ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ನೀಡಿ ಆ ಕುಟುಂಬಗಳಿಗೆ ಹಬ್ಬದ ಸಂದರ್ಭದಲ್ಲಿ ನೆರವು ನೀಡಿದೆ.

ಈ ಸಂದರ್ಭದಲ್ಲಿ ಸಂಸ್ಥೆಯ ಟ್ರಸ್ಟಿಗಳಾದ ಉದಯಕುಮಾರ ಬಾಗುನವರ, ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ಕೃಷ್ಣಾ ಲಮಾಣಿ, ಪ್ರಾಣೇಶ ಹೇಮಾದ್ರಿ, ಮಂಜುನಾಥ ಕಂಬಿ ಸೇರಿದಂತೆ ಇತರರು ಇದ್ದರು.

Edited By : Manjunath H D
Kshetra Samachara

Kshetra Samachara

24/10/2020 08:20 pm

Cinque Terre

22.17 K

Cinque Terre

1

ಸಂಬಂಧಿತ ಸುದ್ದಿ