ಕುಂದಗೋಳ : ನಮ್ಮ ಬದುಕಿಗೆ ಬೆನ್ನಟ್ಟಿ ಕಾಡುವ ಕಷ್ಟಗಳನ್ನೇ ನೆನಸುತ್ತಾ ಕೂತರೇ ನಾವು ಜನರ ಕಷ್ಟಕ್ಕೆ ಸ್ಪಂದಿಸುವುದು ಯಾವಾಗ ಎಂದು ಇಲ್ಲೊಬ್ಬ ಮಹಿಳೆ ತನ್ನ ಕಷ್ಟಗಳನ್ನ ಬದಿಗೊತ್ತಿ ಇತರರಿಗೆ ಸಹಾಯ ಮಾಡುತ್ತ ಮಾದರಿಯಾಗಿದ್ದಾಳೆ.
ಕುಂದಗೋಳ ತಾಲೂಕಿನ ಇಂಗಳಗಿ ಗ್ರಾಮದ ಬಿ.ಕಾಮ್ ಪದವೀಧರೆ ಈರಮ್ಮ ಗಂಗಪ್ಪ ಮುಗಳಿ ಎಂಬ ಹುಟ್ಟು ವಿಕಲಚೇತನ ಮಹಿಳೆ ತಂದೆ ತಾಯಿ ಇಬ್ಬರೂ ಇರದ ಅನಾಥೆಯಾದರು ಇಡೀ ಕುಂದಗೋಳ ತಾಲೂಕಿನ ಜನರ ಸೇವೆಯಿಂದ ಮನೆ ಮಗಳಾಗಿ ಗುರುತಿಸಿಕೊಂಡು ವಿಕಲಚೇತನ, ಬುದ್ಧಿಮಾಂದ್ಯ, ಮಾನಸಿಕವಾಗಿ ನೊಂದವರ ಮನೆಗೆ ಹೋಗಿ ಅವರಿಗೆ ಸರ್ಕಾರ ಇವರಿಗಾಗಿ ನೀಡುವ ಸವಲತ್ತು ಸೌಕರ್ಯಗಳ ಬಗ್ಗೆ ತಿಳಿಸಿ ಕೊಡಿಸುವ ಜವಾಬ್ದಾರಿಯನ್ನ ಯಾವುದೇ ಫಲಾಪೇಕ್ಷೆ ಇಲ್ಲದೆ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
24/10/2020 05:09 pm