ಕಲಘಟಗಿ:ಕರ್ನಾಟಕ ಸಂಗ್ರಾಮ ಸೇನೆ ವತಿಯಿಂದ ನವೆಂಬರ್ ೧ ರಂದು ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ "ಕನ್ನಡ ಕಂಕಣ ದಿನ" ಆಚರಣೆಯ ಪತ್ರಿಕೆಯನ್ನು ದಾಸ್ತಿಕೊಪ್ಪದ ಹನ್ನೆರಡು ಮಠದ ಆವರಣದಲ್ಲಿ ಪತ್ರಕರ್ತರು, ತಾಲೂಕಾ ಕಸಾಪ ಗೌರವ ಕಾರ್ಯದರ್ಶಿ ಮಲ್ಲಿಕಾರ್ಜುನ ಪುರದನಗೌಡರ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಸಂಗ್ರಾಮ ಸೇನೆಯ ತಾಲೂಕಾ ಅಧ್ಯಕ್ಷ ಸಾತಪ್ಪ ಕುಂಕೂರ ಮಾತನಾಡಿ,ಕರೋನಾ ಮಾಹಾಮಾರಿ ಇರುವುದರಿಂದ ರಾಜ್ಯೋತ್ಸವವನ್ನು ಸರಳವಾಗಿ ಕನ್ನಡ ಕಂಕಣ ಕಟ್ಟಿಕೊಳ್ಳುವ ಮೂಲಕ ಆಚರಿಸೋಣ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಸಂಗ್ರಾಮ ಸೇನೆಯ ಉಪಾಧ್ಯಕ್ಷ ಶಂಕರಗೌಡ ಭಾವಿಕಟ್ಟಿ,ವಿದ್ಯಾರ್ಥಿ ಘಟಕದ ತಾಲೂಕ ಅಧ್ಯಕ್ಷ ನಿತಿಶಗೌಡ ತಡಸ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
22/10/2020 08:43 pm