ಹುಬ್ಬಳ್ಳಿ: ಕೊಳಚೆ ನೀರಿನ ಗುಂಡಿಯಲ್ಲಿ ಬಿದ್ದಿದ್ದ ಹಸುವೊಂದನ್ನು ಕಾಪಾಡುವ ಮೂಲಕ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ಹೌದು. ಹುಬ್ಬಳ್ಳಿಯ ಅಮರಗೋಳದಲ್ಲಿರುವ ಕೊಳಚೆ ನೀರಿನ ಗುಂಡಿಯಲ್ಲಿ ಹಸುವೊಂದು ಮೇಯಲು ಹೋದ ಸಂದರ್ಭದಲ್ಲಿ ಬಿದ್ದಿತ್ತು. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ಹಸುವನ್ನು ರಕ್ಷಿಸಿದ್ದಾರೆ.
ಡಿ.ಎಫ್.ಒ ವಿನಾಯಕ ಕಲುಟಕರ ನಿರ್ದೇಶನದಲ್ಲಿ ಸಿಬ್ಬಂದಿಯಾದ ಪ್ರವೀಣಕುಮಾರ ಸೇರಿದಂತೆ ಇತರರು ರಕ್ಷಣಾ ಕಾರ್ಯದಲ್ಲಿದ್ದರು.
Kshetra Samachara
16/10/2020 05:09 pm