ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಜಿಲ್ಲಾಡಳಿತ ಸ್ವಲ್ಪ ಕಣ್ಣು ಬಿಟ್ಟು ನೋಡಬೇಕಿದೆ,ಬಿಕ್ಷುಕರ,ನಿರ್ಗತಿಕರ ಅವ್ಯವಸ್ಥೆ

ಹುಬ್ಬಳ್ಳಿ: ನೆಲವನ್ನು ಹಾಸಿಗೆ ಮಾಡಿಕೊಂಡು, ಆಕಾಶವನ್ನು ಹೊದಿಕೆ ಮಾಡಿಕೊಂಡು ಎಲ್ಲೆಂದರಲ್ಲಿ ಮಲಗಿರುವ ಬಿಕ್ಷುಕರಿಂದ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ.ಅಲ್ಲದೇ ವಾಣಿಜ್ಯನಗರಿಯಲ್ಲಂತೂ ಸಮಸ್ಯೆ ಮಿತಿಮೀರಿದ್ದು,ಜಿಲ್ಲಾಡಳಿತ ಮಾತ್ರ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ.

ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಬಳಿಯಲ್ಲಿ ರಸ್ತೆಯಲ್ಲಿ ಮಲಗಿಕೊಂಡಿರುವ ಬಿಕ್ಷುಕರಿಂದ ವೇಗವಾಗಿ ಸಂಚರಿಸುವ ಸವಾರರಿಗೆ ತೊಂದರೆಯಾಗುತ್ತಿದ್ದು,ಹಲವಾರು ಬಾರಿ ಪಾದಚಾರಿಗಳೊಂದಿಗೆ ಬಿಕ್ಷುಕರು ಜಗಳ ಕೂಡ ಮಾಡಿರುವಂತ ಸನ್ನಿವೇಶಗಳು ನಡೆದಿವೆ.ಅಲ್ಲದೇ ನಿರ್ಗತಿಕರಿಗೆ ಹಾಗೂ ನಿರಾಶ್ರಿತರಿಗೆ ವಸತಿ ಹಾಗೂ ಊಟದ ಕಲ್ಪಿಸಬೇಕಿರುವ ಜಿಲ್ಲಾಡಳಿತ ಮಾತ್ರ ಯಾವುದೇ ಕ್ರಮಗಳನ್ನು ಕೈಗೆತ್ತಿಕೊಳ್ಳುತ್ತಿಲ್ಲ.

ಅಲ್ಲದೇ ಬಿಕ್ಷುಕರಿಗಾಗಿಯೇ ನೈಋತ್ಯ ರೈಲ್ವೇ ಇಲಾಖೆಯಿಂದ ಅಂತ್ಯೋದಯ ಕಲ್ಯಾಣ ಕೇಂದ್ರ ಸ್ಥಾಪಿಸಲಾಗಿದೆ.ಆದರೇ ಬಿಕ್ಷುಕರು,ನಿರ್ಗತಿಕರು ಮಾತ್ರ ಇತ್ತ ತಲೆ ಕೂಡ ಇಟ್ಟು ಮಲಗುತ್ತಿಲ್ಲ.ಇಂತಹ ಅವ್ಯವಸ್ಥೆಯಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿದೆ.ಮಾನಸಿಕ ಅಸ್ವಸ್ಥರು ಹಾಗೂ ನಿರ್ಗತಿಕರು ಹೆಚ್ಚಾಗಿದ್ದು,ಜಿಲ್ಲಾಡಳಿತ ಸೂಕ್ತ ನಿರ್ದೇಶನ ಮೇರೆಗೆ ಬಿಕ್ಷುಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಮೂಲಕ ಸಾರ್ವಜನಿಕರ ಹಿತವನ್ನು ಕಾಪಾಡಬೇಕಿದೆ.

Edited By :
Kshetra Samachara

Kshetra Samachara

14/10/2020 08:26 pm

Cinque Terre

28.64 K

Cinque Terre

8

ಸಂಬಂಧಿತ ಸುದ್ದಿ