ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅವಧಿ ಮೀರಿದರೂ ಮಾರಾಟಕ್ಕೆ ಸಿದ್ಧ:ಅಬಕಾರಿ ಇಲಾಖೆ ಬಿಗ್ ಶಾಕ್

ಹುಬ್ಬಳ್ಳಿ: ಇಷ್ಟು ದಿನ ಉತ್ಪನ್ನಗಳನ್ನು ಎಕ್ಸಪೈರ್ ಡೆಟ್ ಗಿಂತ ಮುಂಚೆ ಮಾರಾಟ ಮಾಡಬೇಕು ಹಾಗೂ ಅನುಭೋಗಿಸುವಂತೆ ಸರ್ಕಾರ ನಿರ್ದೇಶನ ನೀಡಿತ್ತು.ಆದರೇ ಈಗ ಉತ್ಪನ್ನವೊಂದನ್ನು ಅವಧಿ ಮುಗಿದ ನಂತರವೂ ಮಾರಾಟ ಮಾಡಲು ಸರ್ಕಾರ ಸೂಚನೆ ನೀಡಿದ್ದು,ಈಗ ಅಂಗಡಿಕಾರರಿಗೆ ಹಾಗೂ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ.ಏನಿದು ಅಂತೀರಾ ಈ ಸ್ಟೋರಿ ನೋಡಿ...

ಲಾಕ್ ಡೌನ್ ಸಂದರ್ಭದಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು‌.ಲಾಕ್ ಡೌನ್ ಸಡಿಲಿಕೆಯಿಂದ ಕೊಂಚ ನಿರಾಳತೆ ನೀಡಿ ಮಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿತ್ತು.ಆದರೇ ಲಾಕ್ ಡೌನ್ ಸಂದರ್ಭದಲ್ಲಿ ದಾಸ್ತಾನು ಆಗಿದ್ದ ಬಿಯರ್ ಅನ್ನು ಅವಧಿ ಮುಗಿದ ನಂತರವೂ ಮಾರಾಟಕ್ಕೆ ಅಬಕಾರಿ ಇಲಾಖೆ ಅನುಮತಿ ನೀಡಿದೆ.

ಮಾರಾಟವಾಗದೇ ಉಳಿದ ಹಾಗೂ ಅವಧಿ ಮೀರಿದ ಬಿಯರ್ ದಾಸ್ತಾನು ಮಾರಾಟಕ್ಕೆ ಅಬಕಾರಿ ಇಲಾಖೆ ಅನುಮತಿಸುತ್ತಿದ್ದಂತೆ ಸನ್ನದುದಾರರು ಕಕ್ಕಾಬಿಕ್ಕಿಯಾಗಿದ್ದಾರೆ.ಅಲ್ಲದೇ ಅಮಲು ಏರಿಸಿಕೊಳ್ಳಲು ಬಂದವರು ತಿರುಗಿಬಿದ್ದರೇ ಏನು ಗತಿ ಎಂಬುವಂತ ಆತಂಕ ಬಾರ್ ಮಾಲೀಕರಲ್ಲಿ ಮನೆ ಮಾಡಿದೆ.

ಕೋವಿಡ್ ಉಂಟಾಗಿರುವ ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ಹಾಗೂ ರಾಜ್ಯ ಸರ್ಕಾರಕ್ಕೆ ರಾಜ್ಯಸ್ಪದ ದೃಷ್ಟಿಯಿಂದ ಅವಧಿ ಮೀರಿದ ಬಿಯರ್ ಅನ್ನು ಮಾರಾಟ ಮಾಡಲು ಡಿ.31ರವರೆಗೆ ವಿಸ್ತರಿಸಲಾಗಿದೆ.ಅಲ್ಲದೇ ಡಿಪೋಗಳಲ್ಲಿರುವ ಬಿಯರ್ ಅನ್ನು ರಾಸಾಯನಿಕ ಕೇಂದ್ರದ ಪ್ರಯೋಗಾಲಯಕ್ಕೆ ಕಳುಹಿಸಿ ಮಾರಾಟ ಮಾಡಲು ಅನುಮತಿ ಪಡೆದುಕೊಂಡು ಗ್ರಾಹಕರಿಗೆ ತಲುಪಿಸಲು ನಿರ್ಧರಿಸಲಾಗಿದೆ.

ಇನ್ನೂ ಬಾರ್ ಗಳಿಗೆ ಬರುವ ಗ್ರಾಹಕರಿಗೆ ಅವಧಿ ಮೀರಿದ ಬಿಯರ್ ನೀಡಿದರೇ ಗ್ರಾಹಕರ ಕೇಳುವ ಪ್ರಶ್ನೆಗಳಿಗೆ ಏನು ಉತ್ತರ ನೀಡಬೇಕು ಎಂಬುವಂತ ಪರಿಸ್ಥಿತಿ ಬಾರ್ ಮಾಲೀಕರಿಗೆ ಎದುರಾಗಿದೆ.ಸರ್ಕಾರ ಕೂಡಲೇ ಇಂತಹ ಗೊಂದಲಗಳಿಗೆ ತೆರೆ ಎಳೆಯಬೇಕಿದೆ.

Edited By :
Kshetra Samachara

Kshetra Samachara

13/10/2020 10:21 pm

Cinque Terre

34.81 K

Cinque Terre

2

ಸಂಬಂಧಿತ ಸುದ್ದಿ