ಹುಬ್ಬಳ್ಳಿ: ಎಲೆ ಮರೆಯ ಕಾಯಿಯಂತೆ ಇಲ್ಲೊಂದು ಸಂಸ್ಥೆ ಸಾಮಾಜಿಕ ಕಾರ್ಯಮಾಡುತ್ತಿದ್ದೆ.ಈ ಸಂಸ್ಥೆ ಮಾಡುವ ಕಾರ್ಯದಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿರುವ ಅದೆಷ್ಟೋ ಜನರಿಗೆ ನವ ಚೈತನ್ಯ ತುಂಬಲು ಸಾಧ್ಯವಾಗಿದೆ.ಯಾವುದು ಆ ಸಂಸ್ಥೆ ಏನಿದು ಕಾರ್ಯ ಅಂತೀರಾ ತೋರಸ್ತೀವಿ ನೋಡಿ...
ಹೀಗೆ ಕಾಲಿಗೆ ಕೃತಕ ಕಾಲು ಹಾಕಿಕೊಂಡು ಕುಳಿತಿರುವ ವ್ಯಕ್ತಿಗಳನ್ನೊಮ್ಮೆ ನೋಡಿ..ಇವರು ಹುಟ್ಟು ಅಂಗವಿಕಲರಲ್ಲ ಯಾವುದೋ ಕೆಟ್ಟ ಸಮಯ ಇವರನ್ನು ಅಂಗವಿಕಲರನ್ನಾಗಿಸಿದೆ.ಇನ್ನೆನೂ ಬದುಕು ಮುಗಿದೇ ಹೋಯಿತು ಎಂದುಕೊಂಡಿದ್ದವರಿಗೆ ಮಹಾವೀರ ಲಿಂಬ್ ಕೇಂದ್ರವು ದಾನಿಗಳ ನೆರವಿನಿಂದ ಬಡ ಅಂಗವಿಕಲರಿಗೆ ಉಚಿತವಾಗಿ ಕೃತಕ ಅಂಗ ಜೋಡಣೆ ಮಾಡುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ.
ಅಖಿಲ ಭಾರತ ಜೈನ್ ಯೂತ್ ಫೆಡರೇಷನ್ ಅಧ್ಯಕ್ಷ ಮಹೇಂದ್ರ ಸಿಂಘಿ ನೇತೃತ್ವದಲ್ಲಿ ಇನ್ನರ್ ವೀಲ್ ಕ್ಲಬ್ ಮೇನ್ ಹಾಗೂ ಪಶ್ಚಿಮ ವಲಯದ ವತಿಯಿಂದ ಶನಿವಾರ ಮಹಾವೀರ ಲಿಂಬ್ ಕೇಂದ್ರಕ್ಕೆ 15 ಜನರಿಗೆ ಜೈಪುರ ಕೃತಕ ಅಂಗ ಜೋಡಣೆಗೆ ತಗಲುವ ವೆಚ್ಚವನ್ನು ದೇಣಿಗೆ ನೀಡುವ ಮೂಲಕ ಅಂಗವಿಕಲರಿಗೆ ಸಹಾಯ ಹಸ್ತ ನೀಡಿದ್ದಾರೆ.
‘ಬದುಕಿನ ಕೆಟ್ಟ ಗಳಿಗೆಯಲ್ಲಿ ಅಂಗವಿಕಲರಾದವರು ಮತ್ತು ಹುಟ್ಟಿನಿಂದಲೇ ಈ ಸಮಸ್ಯೆ ಎದುರಿಸುತ್ತಿರುವವರಿಗೆ ಮಹಾವೀರ ಲಿಂಬ್ ಕೇಂದ್ರ ಆಶಾಕಿರಣವಾಗಿ 20 ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿದೆ. ಮೊದಲು ದಿನಕ್ಕೆ ಒಂದು ಅಂಗ ಮಾತ್ರ ಪೂರೈಸಲಾಗುತ್ತಿತ್ತು ಈಗ ದಿನಕ್ಕೆ 3 ರಿಂದ 4 ಅಂಗಗಳನ್ನು ಪೂರೈಕೆ ಮಾಡಲಾಗುತ್ತಿದೆ.
ಒಟ್ಟಿನಲ್ಲಿ ಅಂಗವಿಕಲರಿಗೆ ಉಚಿತವಾಗಿ ಕೃತಕ ಕಾಲು ಜೋಡಿಸಿ ಸಾಮಾಜಿಕ ಕಾರ್ಯಮಾಡುತ್ತಿರುವ ಮಹಾವೀರ ಲಿಂಬ್ ಆಶಾಕಿರಣದ ಕಾರ್ಯ ಇನ್ನೂ ಹೆಚ್ಚಿನ ಜನರಿಗೆ ತಲುಪಲಿ ಎಂಬುವುದು ನಮ್ಮ ಆಶಯ.
Kshetra Samachara
12/10/2020 11:08 am