ಧಾರವಾಡ: ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮರಳಿ ಬಾರದೂರಿಗೆ ಪಯಣ ಬೆಳೆಸಿದ್ದಾರೆ. ಸದಾ ಹಸನ್ಮುಖಿ, ತಮ್ಮ ಕ್ರಿಯಾಶೀಲತೆಯಿಂದಲೇ ಸತತ ನಾಲ್ಕು ಬಾರಿ ಬೆಳಗಾವಿ ಸಂಸದರಾಗಿ ಆಯ್ಕೆಯಾದಂತವರು. ಅವರ ಸಾವು ಇಡೀ ಬಿಜೆಪಿ ಪಾಳೆಯದಲ್ಲಿ ದಿಗ್ಬ್ರಾಂತಿಯನ್ನುಂಟು ಮಾಡಿದೆ. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರೊಂದಿಗೆ ಸಂಬಂಧವನ್ನೂ ಬೆಳೆಸಿದ್ದ ಅಂಗಡಿ, ಧಾರವಾಡದ ಬಿಜೆಪಿ ಕಾರ್ಯಕರ್ತರೊಂದಿಗೂ ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದರು. ಅಂಗಡಿ ಅವರ ಅಕಾಲಿಕ ಸಾವಿನಿಂದ ಧಾರವಾಡದ 'ತಾವರೆ' (ಕಮಲ) ಶೋಕ ಸಾಗರದಲ್ಲಿ ಮುಳುಗಿದಂತಾಗಿದೆ.
ಇಂದು ಧಾರವಾಡದ ಬಿಜೆಪಿ ಕಚೇರಿಯಲ್ಲಿ ಸುರೇಶ ಅಂಗಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇಡೀ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರು ಸೇರಿ ಉತ್ತರ ಕರ್ನಾಟಕ ಭಾಗದ ಪ್ರಭಾವಿ ನಾಯಕನನ್ನು ಕಳೆದುಕೊಂಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದರು.
ಬೆಳಗಾವಿ-ಕಿತ್ತೂರು-ಧಾರವಾಡ ಹಾಗೂ ದಾಂಡೇಲಿ ರೈಲು ಮಾರ್ಗ ಸುರೇಶ ಅಂಗಡಿ ಅವರು ಕೊಟ್ಟಂತ ಅದ್ಭುತ ಕೊಡುಗೆಗಳು ಎಂದು ಬಿಜೆಪಿ ಕಾರ್ಯಕರ್ತರು, ಅಂಗಡಿ ಅವರ ಕೆಲಸ ಕಾರ್ಯಗಳನ್ನು ನೆನೆದು ಕಂಬನಿ ಮಿಡಿದರು.
Kshetra Samachara
24/09/2020 03:24 pm