ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರಿಗೆ ಮಾತ್ರವಲ್ಲದೆ ಉತ್ತರ ಕರ್ನಾಟಕ ಭಾಗದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಐದು ಜನ ತಜ್ಞ ವೈದ್ಯರ ಸಮ್ಮುಖದಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಸ್ವಸ್ತ್ಯ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ಯಶಸ್ವಿಯಾಗಿ ಲೋಕಾರ್ಪಣೆಗೊಂಡಿದೆ.
ಹೌದು.. ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣದ ಎದುರಿನಲ್ಲಿ ಆರಂಭಗೊಂಡಿರುವ ಸ್ವಸ್ತ್ಯ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯು ಅಧುನಿಕ ತಂತ್ರಜ್ಞಾನ ಹಾಗೂ ಗುಣಮಟ್ಟದ ಸೇವೆಯನ್ನು ನೀಡಲು ಸಿದ್ಧವಾಗಿದೆ. ಸ್ವಸ್ತ್ಯ ಮಲ್ಟಿ ಸ್ಪೆಶಾಲಿಟಿ ಕ್ಲಿನಿಕ್ ದಲ್ಲಿ ಡಾ. ಪುನಿತ್ ಪಿ.ಜೆ, ಡಾ.ಶಿವರಂಜನ್ ಬಾಲಿ, ಡಾ.ಪವನ್ ಜೋಶಿ, ಡಾ.ಕಿರಣ್ ನಿಲುಗಲ್, ಡಾ.ವಿಶಾಲ್ ಕುಲಕರ್ಣಿ ಸೇರಿದಂತೆ ನುರಿತ ವೈದ್ಯಕೀಯ ತಜ್ಞರು ತಂಡ ಸಾರ್ವಜನಿಕರ ಸೇವೆಗೆ ಸಿದ್ಧವಾಗಿದ್ದು, ಅದ್ಧೂರಿಯಾಗಿ ಲೋಕಾರ್ಪಣೆಗೊಂಡಿದೆ.
ಇನ್ನೂ ವಿಘ್ನ ನಿವಾರಕ ವಿಘ್ನೇಶ್ವರನ ಪೂಜೆಯ ಮೂಲಕ ಆಸ್ಪತ್ರೆಯು ಲೋಕಾರ್ಪಣೆಗೊಂಡಿದ್ದು, ಗುಣಮಟ್ಟದ ಸೇವೆಯ ಜೊತೆಗೆ ಜನರಿಗೆ ಆರ್ಥಿಕ ಹೊರೆಯನ್ನು ತಗ್ಗಿಸುವ ಮೂಲಕ ವೈದ್ಯಕೀಯ ಸೇವೆ ಮಾಡಲು ಐದು ಜನರ ವೈದ್ಯರ ತಂಡ ಮುಂದಾಗಿದೆ. ಈಗಾಗಲೇ ಖಾಸಗಿ ಆಸ್ಪತ್ರೆಯ ಬಗ್ಗೆ ಆರ್ಥಿಕ ವ್ಯವಸ್ಥೆ ಬಗ್ಗೆ ಆತಂಕಗೊಂಡ ಜನರ ಭಯವನ್ನು ದೂರ ಮಾಡುವ ಮೂಲಕ ವೈದ್ಯಕೀಯ ಸೇವೆ ನೀಡಲು ಸ್ವಸ್ತ್ಯ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯು ಮುಂದಾಗಿದೆ.
ಒಟ್ಟಿನಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಯ ಆಯಕಟ್ಟಿನ ಪ್ರದೇಶದಲ್ಲಿ ವಿನೂತನವಾಗಿ ಆರಂಭಗೊಂಡಿರುವ ಆಸ್ಪತ್ರೆಯು ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಯ ಜೊತೆಗೆ ಸಾರ್ವಜನಿಕ ಕಾಳಜಿಯನ್ನು ನಿಭಾಯಿಸುವ ಕಾರ್ಯವನ್ನು ಮಾಡಲಿ ಎಂಬುವುದು ಪಬ್ಲಿಕ್ ನೆಕ್ಸ್ಟ್ ಆಶಯ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
10/10/2022 10:04 pm