ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: 301 ಜಾನುವಾರುಗಳಿಗೆ ಚರ್ಮಗಂಟು ರೋಗ: ಪ್ಲೀಸ್ ಲಸಿಕೆ ಕೊಡಿ ಡಾಕ್ಟ್ರೇ..

ಕುಂದಗೋಳ: ಅತಿವೃಷ್ಟಿ ಬರೆ ಆಯ್ತು. ಬೆಳೆಗಳು ಹಾಳಾಗಿ ಹೋಯ್ತು. ಇನ್ನೂ ಬೆಳೆ ಪರಿಹಾರ ಬೆಳೆ ವಿಮೆ. ಪರಿಹಾರ ಬರುತ್ತೇ ಎಂಬ ನಂಬಿಕೆಯೇ ದೂರವಾಗುವ ದಿನಗಳಲ್ಲಿ ಅನ್ನದಾತನಿಗೆ ಮತ್ತೊಂದು ಭಯ ಎದುರಾಗಿದೆ. ಇದು ರೈತಾಪಿ ಕುಲವನ್ನೇ ನಿದ್ದೆಗೆಡಿಸಿದೆ.

ಎಲ್ಲೆಡೆ ರಣತಾಂಡವ ಸೃಷ್ಟಿಸಿದ ಜಾನುವಾರು ಚರ್ಮಗಂಟು ರೋಗದ ಪ್ರಕರಣಗಳು ಕುಂದಗೋಳ ತಾಲೂಕಿನಲ್ಲಿ ಹೆಚ್ಚಾಗಿ ಕಂಡು ಬಂದಿದ್ದು, ಇದುವರೆಗೆ ಬರೋಬ್ಬರಿ 301 ಚರ್ಮಗಂಟು ರೋಗದ ಪ್ರಕರಣ ಜಾನುವಾರುಗಳಲ್ಲಿ ಕಾಣಿಸಿದೆ. ಕುಂದಗೋಳ ತಾಲೂಕಿನ 25 ಹಳ್ಳಿಗಳಲ್ಲಿ ಜಾನುವಾರು ಚರ್ಮ ಗಂಟು ರೋಗ ಏರಿಕೆ ಕಂಡಿದ್ದು, ಅದರಲ್ಲಿ 13 ಎಮ್ಮೆ ಸಹ ರೋಗಕ್ಕೆ ತುತ್ತಾಗಿದ್ರೇ, ಇನ್ನೂಳಿದಂತೆ ಆಡು, ಮೇಕೆ, ಟಗರುಗಳಿಗೆ ಈ ರೋಗ ಬಾಧಿಸಿಲ್ಲ.

ಜಾನುವಾರು ಚರ್ಮಗಂಟು ರೋಗದ ವೈರಸ್ ಆಟಾಟೋಪಕ್ಕೆ ಎತ್ತು, ಎಮ್ಮೆ, ಆಕಳು ನರಳಾಡುತ್ತಿವೆ. ರೈತರ ಕೃಷಿ ಚಟುವಟಿಕೆ ಹಾಗೂ ಹೈನುಗಾರಿಕೆಗೆ ಇದರಿಂದ ಪೆಟ್ಟು ಬಿದ್ದಿದೆ. ರೋಗ ಬಾಧಿಸುತ್ತಿರುವ ಜಾನುವಾರುಗಳನ್ನು ರೈತರು ಪಶು ಆಸ್ಪತ್ರೆಗೆ ಕರೆತರುತ್ತಿದ್ದಾರೆ.

ಇನ್ನೂ 7 ಹಳ್ಳಿಗಳಲ್ಲಿ ಈ ರೋಗ ಹತೋಟಿಯಲ್ಲಿದ್ದು, ಕೆಲವೆಡೆ ರೋಗದ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆಗೆ ಹೆಚ್ಚಿನ ಬೇಡಿಕೆ ಹೆಚ್ಚಾಗಿ ಕೇಳಿ ಬರುತ್ತಿವೆ. ಒಟ್ಟಿನಲ್ಲಿ ಈಗಾಗಲೇ 4,897 ಜಾನುವಾರುಗಳಿಗೆ ಲಸಿಕೆ ನೀಡಿದರೂ ರೋಗದ ಅಟ್ಟಹಾಸಕ್ಕೆ ಲಸಿಕೆ ಸಮರ್ಪಕವಾಗಿ ಸಾಕಾಗದೆ ವೈದ್ಯರ ಕೊರತೆಯಿಂದ ಪಶುಗಳು ಬಳಲುತ್ತಿವೆ.

-ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ

Edited By : Shivu K
Kshetra Samachara

Kshetra Samachara

30/09/2022 12:45 pm

Cinque Terre

37.83 K

Cinque Terre

0

ಸಂಬಂಧಿತ ಸುದ್ದಿ