ನಮ್ಮ ಹೃದಯದ ಲಬ್ ಡಬ್ ಲಬ್ ಡಬ್ ಬಡಿತವೇ ಜೀವಂತಿಕೆಯ ಸೆಲೆ. ನಮ್ಮ ಹೃದಯ ಸದಾ ಆರೋಗ್ಯವಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಇಂದು ಆ ಹೃದಯದ ದಿನ ಸೆ.29 ರಂದು ವಿಶ್ವ ಹೃದಯ ದಿನ. ಈ ದಿನದಂದು ತೋಡಾ ದಿಲ್, ತೋಡಾ ಹಾರ್ಟ್ ಧ್ಯೇಯ ವಾಕ್ಯದೊಂದಿಗೆ ಎಸ್ ಡಿಎಂ ನಾರಾಯಣ ಹೃದಯಾಲಯ ಆಸ್ಪತ್ರೆ ಮತ್ತು ಪಬ್ಲಿಕ್ ನೆಕ್ಸ್ಟ್ ಸಂಯೋಗದಿಂದ ಆರೋಗ್ಯ ಪೂರ್ಣ ಜೀವನಕ್ಕೆ ನಮ್ಮ ಹೃದಯದ ಆರೋಗ್ಯ, ಕಾಳಜಿ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಮನಸ್ಸಿಗೆ ಬೇಕಾದ ಆಹಾರ ತಿಂದು ಹೃದಯದ ಕಾಳಜಿ ವಹಿಸಿ. ಕೆಟ್ಟ ಹವ್ಯಾಸದಿಂದ ದೂರವಿರಿ, ಉತ್ತಮ ಆಹಾರ ಸೇವಿಸಿ, ಪೌಷ್ಠಿಕ ಆಹಾರ,ದಿನದ 1 ಗಂಟೆ ವ್ಯಾಯಾಮ, 8 ಗಂಟೆ ನಿದ್ರೆ, ಮನಸ್ಸು ಮತ್ತು ಹೃದಯದ ಸಮತೋಲನ ಕಾಯ್ದುಕೊಳ್ಳುವುದು ಉತ್ತಮ ಜೀವನದ ಹರದಾರಿ ಎನ್ನುತ್ತಾರೆ ಡಾ.ರವಿ ಎಸ್.ಜೈನಾಪುರ ಎಮ್ ಡಿ (ಇಂಟರ್ ನಲ್ ಮೆಡಿಸಿನ್) ಡಿಎನ್ ಬಿ- ಕಾರ್ಡಿಯಾಲಜಿ ಹೃದಯ ರೋಗ ತಜ್ಞರು
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/09/2022 05:32 pm