ಹೃದಯಾಘಾತ ಮತ್ತು ಇದಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಗಟ್ಟಲು ಹಾಗೂ ಅವುಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನವನ್ನಾಗಿ ಆಚರಿಸಲಾಗುತ್ತದೆ.
ಈ ದಿನದಂದು ಎಸ್ ಡಿಎಂ ನಾರಾಯಣ ಹೃದಯಾಲಯ ಆಸ್ಪತ್ರೆ ಮತ್ತು ಪಬ್ಲಿಕ್ ನೆಕ್ಸ್ಟ್ ಸಂಯೋಗದಿಂದ ಆರೋಗ್ಯ ಪೂರ್ಣ ಜೀವನಕ್ಕೆ ನಮ್ಮ ಹೃದಯದ ಆರೋಗ್ಯ, ಕಾಳಜಿ ಕುರಿತು ಜಾಗೃತಿ ಮೂಡಿಸಲು ಮತ್ತು 'ಸ್ವಲ್ಪ ಮನಸ್ಸು, ಸ್ವಲ್ಪ ಹೃದಯ' (ತೋಡಾ ದಿಲ್, ತೋಡಾ ಹಾರ್ಟ್) ಎಂಬ ಧ್ಯೇಯದೊಂದಿಗೆ ಈ ದಿನವನ್ನು ಆಚರಿಸಲಾಗುತ್ತದೆ.
ನಮ್ಮ ದಿಲ್ ಅಂದ್ರೆ ನಮ್ಮ (ಮನಸ್ಸು)ನಲ್ಲಿರುವ ಭಾವನೆಗಳನ್ನು ಸ್ಥಿರವಾಗಿ ಸಮತೋಲನದಲ್ಲಿ ನಿಭಾಯಿಸುವ ಮೂಲಕ ಉತ್ತಮ ಹಾರ್ಟ್ ಹೊಂದೋಣ. ಇದು ಇಂದಿನ ನಮ್ಮೆಲ್ಲರ ಪ್ರತಿಜ್ಞೆಯಾಗಲಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/09/2022 10:11 am