ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಬ್ಲಿಕ್ ನೆಕ್ಸ್ಟ್ ಹೆಲ್ತ್ ಕ್ಯಾಂಪ್ ಗೆ ಭರ್ಜರಿ ರೆಸ್ಪಾನ್ಸ್

ಹುಬ್ಬಳ್ಳಿ : ಮಾಧ್ಯಮ ಲೋಕದಲ್ಲಿ ಬಲು ವಿಶೇಷ ಎಂಬಂತೆ ಪಬ್ಲಿಕ್ ನೆಕ್ಸ್ಟ್ ಓದುಗರ ಆರೋಗ್ಯಕ್ಕೆ ಸಂಬಂಧಿಸಿದಂತೆ ಆರೋಗ್ಯ ತಪಾಸಣೆ ಕಾರ್ಯಕ್ರಮ ಏರ್ಪಡಿಸಿದ್ದು, ಮಕ್ಕಳು, ವಯಸ್ಕರು, ವಯೋವೃದ್ಧರು ಸೇರಿದಂತೆ ಎಲ್ಲಾ ವಯೋಮಾನದವರ ಆರೋಗ್ಯ ಸಮಸ್ಯೆಗೆ ನುರಿತ ತಜ್ಞ ವೈದ್ಯರು ಸಲಹೆ ನೀಡಿದ್ರು.

ಹುಬ್ಬಳ್ಳಿ ನಗರದ ಅಕ್ಷಯ ಪಾರ್ಕ್ ಬಳಿಯ ಜೈಂಟ್ಸ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಪಬ್ಲಿಕ್ ನೆಕ್ಸ್ಟ್ ಸಹಭಾಗಿತ್ವದಲ್ಲಿ ಏರ್ಪಟ್ಟ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹೃದಯರೋಗ ತಜ್ಞರು, ಮೂತ್ರಪಿಂಡ ತಜ್ಞರು, ಎಲುಬು ಕೀಲು ತಜ್ಞರು, ಸ್ತ್ರೀರೋಗ ತಜ್ಞರು ಸೇರಿದಂತೆ ಶ್ರವಣ ದೋಷ ಸಂಬಂಧಿ ಸಮಸ್ಯೆ, ಕಣ್ಣಿನ ಸಮಸ್ಯೆಗೆ ಸಂಬಂಧಿಸಿದಂತೆ ಅಗರವಾಲ್ ಆಸ್ಪತ್ರೆಯ ನುರಿತ ವೈದ್ಯರು ಸಲಹೆ ನೀಡಿದರು.

ಮುಖ್ಯವಾಗಿ ಆಧುನಿಕ ದಿನಗಳಲ್ಲಿ ಹೆಚ್ಚುತ್ತಿರುವ ಹೃದಯ ಸಂಬಂಧಿ ಸಮಸ್ಯೆಗಳಿಗೆ ಎಸ್.ಡಿ.ಎಮ್ ನಾರಾಯಣ ಹೃದಯಾಲಯದ ವೈದ್ಯ ಡಾ.ರವಿ ಜೈನಾಪುರ, ಡಾ.ಮಹಾಂತೇಶ ಉಳ್ಳಾಗಡ್ಡಿ, ಮ್ಯಾನೇಜರ್ ಅಜಯ್ ಹುಲಮನಿ, ಸೀನಿಯರ್ ಎಕ್ಸಿಕ್ಯೂಟಿವ್ ವಿನಾಯಕ ಗಂಜಿ, ಇಕೋ ಟೆಕ್ನೀಷಿಯನ್ ಲಕ್ಷ್ಮೀ ನಾರಾಯಣ, ನರ್ಸಿಂಗ್ ಸ್ಟಾಫ್ ಲಕ್ಷ್ಮೀ ಪೂಜಾ ಭಾಗವಹಿಸಿ ಸಾರ್ವಜನಿಕರ ಹೃದಯ ಸಂಬಂಧಿ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಚಿಕಿತ್ಸೆ, ಹಾಗೂ ಸಲಹೆ ನೀಡಿದರು.

ಇನ್ನುಳಿದಂತೆ ಜೈಂಟ್ಸ್ ಸ್ಕೂಲ್ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಒಳ್ಳೆಯ ಪ್ರೋತ್ಸಾಹ ತುಂಬಿದರು. ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು ಮಕ್ಕಳನ್ನು ಕರೆತಂದು ಆರೋಗ್ಯ ತೊಂದರೆಗಳಿಗೆ ಸಲಹೆ ಪಡೆದರು.

ಮಧುಮೇಹ, ರಕ್ತದೊತ್ತಡ ಪರೀಕ್ಷೆ ನಡೆಸಿ ವೈದ್ಯರ ಆರೋಗ್ಯದ ಕಾಳಜಿಯ ಬಗ್ಗೆ ಟಿಪ್ಸ್ ನೀಡಿದರು. ಎಸ್.ಡಿ.ಎಮ್ ನಾರಾಯಣ ಹೃದಯಾಲಯ ಹೃದಯ ರೋಗಿಗಳ ಸಮಸ್ಯೆಗೆ ಉತ್ತಮ ಸ್ಪಂದನೆ ನೀಡಿದ್ರು. ಅದರಂತೆ ಕಾರ್ಯಕ್ರಮಕ್ಕೆ ಹಾಜರಾದ ಅಗರವಾಲ್ ಆಸ್ಪತ್ರೆ ವೈದ್ಯರು, ಇತರೆ ವೈದ್ಯರು ಹಾಗೂ ಸಿಬ್ಬಂದಿ ಹೆಚ್ಚಿನ ಸಹಕಾರ ನೀಡಿ ಆರೋಗ್ಯ ಶಿಬಿರ ಯಶಸ್ವಿಗೊಳಿಸಿದರು.

Edited By : Manjunath H D
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

19/09/2022 07:57 pm

Cinque Terre

32.99 K

Cinque Terre

0

ಸಂಬಂಧಿತ ಸುದ್ದಿ