ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಆರೋಗ್ಯ ತಪಾಸಣೆಗೆ ಆತ್ಮೀಯ ಆಹ್ವಾನ; ನಿಮ್ಮ ಉತ್ತಮ ಆರೋಗ್ಯವೇ ಪಬ್ಲಿಕ್ ನೆಕ್ಸ್ಟ್ ಆಶಯ

ಹುಬ್ಬಳ್ಳಿ: ಆರೋಗ್ಯ ಎಂಬುವುದು ನಿಜಕ್ಕೂ ಪ್ರತಿಯೊಬ್ಬರಿಗೂ ಸೌಭಾಗ್ಯವೇ ಸರಿ. ಸಾರ್ವಜನಿಕರ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಪಬ್ಲಿಕ್ ನೆಕ್ಸ್ಟ್ ಮಾಧ್ಯಮದ ಜವಾಬ್ದಾರಿ ಜೊತೆಗೆ ಸಾಮಾಜಿಕ ಕಳಕಳಿಯನ್ನು ತೋರಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಶೈಕ್ಷಣಿಕ ಸೇವೆಯ ಮೂಲಕ ಹೆಸರು ಮಾಡಿರುವ ಜೈಂಟ್ಸ್ ಗ್ರೂಪ್ ಆಫ್ ಹುಬ್ಬಳ್ಳಿ ಸಿಟಿ ಸಹಯೋಗದೊಂದಿಗೆ ಇದೇ 18ರಂದು ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಜೈಂಟ್ಸ್ ಎಜುಕೇಶನ್ ಸೊಸೈಟಿಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಹೌದು... ಮಾಧ್ಯಮ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪಬ್ಲಿಕ್ ನೆಕ್ಸ್ಟ್ ಈಗಾಗಲೇ ಸುಮಾರು ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸುವ ಮೂಲಕ ಜನರಲ್ಲಿ ಆರೋಗ್ಯದ ಜಾಗೃತಿ ಮೂಡಿಸುತ್ತಾ ಬಂದಿದ್ದು, ಈ ಬಾರಿ ಕೂಡ ಸಾಕಷ್ಟು ವಿನೂತನ ಹಾಗೂ ವಿಭಿನ್ನ ಶೈಲಿಯ ಆರೋಗ್ಯ ತಪಾಸಣೆಗೆ ಮುನ್ನುಡಿ ಬರೆಯಲು ಮುಂದಾಗಿದೆ. ಇಂತಹ ಕಾರ್ಯಕ್ಕೆ ಜೈಂಟ್ಸ್ ಗ್ರೂಪ್ ಆಫ್ ಹುಬ್ಬಳ್ಳಿ ಸಿಟಿ ಕೈ ಜೋಡಿಸಿರುವುದು ನಿಜಕ್ಕೂ ವಿಶೇಷವಾಗಿದೆ. ಹಾಗಿದ್ದರೇ ಆರೋಗ್ಯ ಶಿಬಿರದ ರೂಪುರೇಷೆಗಳ ಬಗ್ಗೆ ಜೈಂಟ್ಸ್ ಗ್ರೂಪ್ ಮುಖ್ಯಸ್ಥರು ಏನು ಹೇಳ್ತಾರೆ ಕೇಳೋಣ..

ಒಂದೇ ಶಿಬಿರದಲ್ಲಿ ನೇತ್ರ ತಪಾಸಣೆ, ಹೃದಯ ತಪಾಸಣೆ, ಮಧುಮೇಹ ಹಾಗೂ ರಕ್ತದೊತ್ತಡದ ತಪಾಸಣೆ, ಶ್ರವಣ(ಕಿವಿ)ತಪಾಸಣೆ, ಚರ್ಮರೋಗ ತಪಾಸಣೆ, ಸ್ತ್ರೀರೋಗ ತಪಾಸಣೆ ಮತ್ತು ಸಮಾಲೋಚನೆ, ಬಂಜೆತನ ಸಂಬಂಧಿಸಿದಂತೆ ತಪಾಸಣೆ ಹಾಗೂ ಸಮಾಲೋಚನೆ, ಮೂತ್ರಪಿಂಡ ಸಂಬಂಧಿಸಿದ ರೋಗದ ತಪಾಸಣೆ ಹಾಗೂ ಆಪ್ತ ಸಮಾಲೋಚನೆ, ಉಸಿರಾಟ ಹಾಗೂ ಶ್ವಾಸಕೋಶದ ತಪಾಸಣೆ, ಎಲುಬು ಕೀಲು ತಜ್ಞರಿಂದ ಸೂಕ್ತ ಸಲಹೆ, ದಂತ ಪರೀಕ್ಷೆ, ಮೂಲವ್ಯಾಧಿ ತಜ್ಞರಿಂದ ಸಮಾಲೋಚನೆ, ಚಿಕ್ಕ ಮಕ್ಕಳ ತಜ್ಞರಿಂದ ಮಕ್ಕಳ ಆರೋಗ್ಯ ತಪಾಸಣೆ, ನರರೋಗ ತಪಾಸಣೆ ಹಾಗೂ ಆಪ್ತ ಸಮಾಲೋಚನೆ ಹೀಗೆ ಹಲವಾರು ಉಚಿತ ಆರೋಗ್ಯ ತಪಾಸಣೆ ಲಭ್ಯವಿದೆ.

ಒಟ್ಟಿನಲ್ಲಿ ಸಾರ್ವಜನಿಕರ ಆರೋಗ್ಯದ ಕಾಳಜಿಯೇ ಪಬ್ಲಿಕ್ ನೆಕ್ಸ್ಟ್ ಮಾಧ್ಯಮದ ಧ್ಯೇಯೋದ್ದೇಶವಾಗಿದೆ. ಹಾಗಿದ್ದರೆ ಇದೇ ಭಾನುವಾರ ಗೋಕುಲ ರಸ್ತೆಯಲ್ಲಿರುವ ಜೈಂಟ್ಸ್ ಎಜುಕೇಶನ್ ಸೊಸೈಟಿಗೆ ತಪ್ಪದೇ ಭೇಟಿ ನೀಡಿ, ನಿಮ್ಮ ಆರೋಗ್ಯದ ತಪಾಸಣೆ ಮಾಡಿಕೊಳ್ಳಿ.

Edited By : Nagesh Gaonkar
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

16/09/2022 10:37 pm

Cinque Terre

70.81 K

Cinque Terre

0

ಸಂಬಂಧಿತ ಸುದ್ದಿ