ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೆ.17 ರಿಂದ ಜೈಂಟ್ಸ್ ಸಪ್ತಾಹ ಆಚರಣೆ: 18ರಂದು ಪಬ್ಲಿಕ್ ನೆಕ್ಸ್ಟ್ ಸಹಯೋಗದೊಂದಿಗೆ ಆರೋಗ್ಯ ಶಿಬಿರ

ಹುಬ್ಬಳ್ಳಿ: ಮಾಧ್ಯಮ ಕ್ಷೇತ್ರದ ಜೊತೆಗೆ ಸಾರ್ವಜನಿಕ ಹಿತಾಸಕ್ತಿಗೆ ಸಾಕಷ್ಟು ಒತ್ತನ್ನು ನೀಡಿರುವ ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಸಹಯೋಗದೊಂದಿಗೆ ಜೈಂಟ್ಸ್ ಗ್ರೂಪ್ ಆಫ್ ಹುಬ್ಬಳ್ಳಿ ಶಹರ ಇವರ ಆಶ್ರಯದಲ್ಲಿ ಜೈಂಟ್ಸ್ ಸಪ್ತಾಹ ಆಚರಣೆ ಅಂಗವಾಗಿ ಇದೇ 18ರಂದು ಬೃಹತ್ ಆರೋಗ್ಯ ಶಿಬಿರವನ್ನು ಗೋಕುಲ ರಸ್ತೆಯಲ್ಲಿರುವ ಜೈಂಟ್ಸ್ ಏಜುಕೇಶನ್ ಸೊಸೈಟಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಹೌದು.. ಜೈಂಟ್ಸ್ ಗ್ರೂಪ್ ಆಫ್ ಹುಬ್ಬಳ್ಳಿ ಶಹರದ ವತಿಯಿಂದ ಜೈಂಟ್ಸ್ ಸಪ್ತಾಹ ಕಾರ್ಯಕ್ರಮವನ್ನು ಸೆ. 17ರಿಂದ 23ರ ವರೆಗೆ ಆಯೋಜನೆ ಮಾಡಲಾಗಿದೆ.

ಜೈಂಟ್ಸ್ ಸಪ್ತಾಹದ ಅಂಗವಾಗಿ ಸೆ.17 ರಂದು ಬೆಳಿಗ್ಗೆ ನಗರದ ಗೋಕುಲ್ ರಸ್ತೆಯಲ್ಲಿರುವ ಜೈಂಟ್ಸ್ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮುಖ್ಯ ಅತಿಥಿಗಳಾಗಿ ಉದ್ಯಮಿ ಡಾ. ವಿ.ಎಸ್.ವಿ. ಪ್ರಸಾದ್ ಅವರು ಆಗಮಿಸಲಿದ್ದು, ನಂತರ ಸಂಜೆ 07 ಗಂಟೆಗೆ ಜೈಂಟ್ಸ್ ಶಹರದ ಹುಬ್ಬಳ್ಳಿ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜರುಗಲಿದೆ. ಮುಖ್ಯ ಅತಿಥಿಗಳಾಗಿ ಮುಂಬೈನ ಜೈಂಟ್ಸ್ ವೆಲಫೇರ್ ಫೌಂಡೇಶನ್ ವಿಶೇಷ ಸದಸ್ಯರಾದ ದಿನಕರ್ ಅಮೀನ್ ಅವರು ಆಗಮಿಸಲಿದ್ದಾರೆ.

ಇನ್ನೂ ನೂತನ ಅಧ್ಯಕ್ಷರಾಗಿ ಡಾ. ಮನೋಜ್ ಭಟ್, ಕಾರ್ಯದರ್ಶಿಯಾಗಿ ವಸಂತ್ ನಾಯ್ಕ್ ಮತ್ತು ಖಜಾಂಚಿಯಾಗಿ ಅಂಬೇಶ ಊಟವಾಲೆ ಮತ್ತು ಉಳಿದ ಪದಾಧಿಕಾರಿಗಳು ಅಧಿಕಾರ ಗ್ರಹಣ ಮಾಡಲಿದ್ದಾರೆ. ಸೆ 18ರಂದು ಬೆ.10-30ಕ್ಕೆ ಪಬ್ಲಿಕ್ ನೆಕ್ಸ್ಟ್ ಸಹಯೋಗದೊಂದಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಜೈಂಟ್ಸ್ ಶಾಲೆಯಲ್ಲಿ ಕೆನರಾ ಬ್ಯಾಂಕ್ ಮತ್ತು ಪಬ್ಲಿಕ್ ನೆಕ್ಸ್ಟ್ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಈ ಆರೋಗ್ಯದ ತಪಾಸಣಾ ಶಿಬಿರದಲ್ಲಿ ಸುಮಾರು 15 ತಜ್ಞ ವೈದ್ಯರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಪಬ್ಲಿಕ್ ನೆಕ್ಸ್ಟ್ ಸಿಇಒ ಮಂಜುನಾಥ ರಾವ್, ಸಿಒಒ ರಾಘವೇಂದ್ರ ರಾವ್ ನೆರವೇರಿಸಲಿದ್ದಾರೆ.

ಸೆ.19ರಂದು ಗೋಕುಲ್ ರಸ್ತೆಯ ಜೈಂಟ್ಸ್ ಶಾಲೆಯಲ್ಲಿ ರಕ್ಷಣಾ ಇಲಾಖೆಯ ಅಗ್ನಿವೀರ ಮತ್ತು ಅಗ್ನಿಪಥ್ ಈ ವಿಷಯದ ಬಗ್ಗೆ ವಿಚಾರ ಸಂಕೀರ್ಣವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಗೋಕುಲ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜೆ.ಎಂ. ಕಾಲಿಮಿರ್ಚಿ ಆಗಮಿಸಲಿದ್ದಾರೆ. ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಜೈಂಟ್ಸ್ ಗ್ರೂಪ್ ಆಫ್ ಹುಬ್ಬಳ್ಳಿ ಶಹರದ ವತಿಯಿಂದ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ವಿನಂತಿ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

15/09/2022 02:56 pm

Cinque Terre

48 K

Cinque Terre

0

ಸಂಬಂಧಿತ ಸುದ್ದಿ