ಧಾರವಾಡ: ಎಸ್.ಡಿ.ಎಂ ನಾರಾಯಣ ಹಾರ್ಟ್ ಸೆಂಟರ್ ಹೃದಯ ಸಂಬಂಧಿ ಕಾಯಿಲೆಗಳ ಚಿಕಿತ್ಸೆಗೆ ಅತ್ಯುತ್ತಮ ಜಾಗ. ಇಲ್ಲಿ ಎಲ್ಲವೂ ಇದೆ. ದೂರದ ಮುಂಬೈ ಇಲ್ಲವೆ ಬೆಂಗಳೂರಿಗೆ ಹೋಗುವ ಅವಶ್ಯಕತೆ ಇಲ್ಲವೇ ಇಲ್ಲ. ಧಾರವಾಡದ ಸತ್ತೂರನಲ್ಲಿರೋ ಎಸ್.ಡಿ.ಎಂ ನಾರಾಯಣ ಹಾರ್ಟ್ ಸೆಂಟರ್ ಜನರ ಸೇವೆಗೆನೆ ಸದ್ದಾ ಸಿದ್ಧವಾಗಿರುತ್ತದೆ.
ನಾರಾಯಣ ಹಾರ್ಟ್ ಸೆಂಟರ್‌ನಲ್ಲಿ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳು ಇವೆ. ಇಲ್ಲಿರೋ ಐಸಿಯು ವ್ಯವಸ್ಥೆ ನಿಜಕ್ಕೂ ಅತಿ ದೊಡ್ಡ ಮಟ್ಟದಲ್ಲಿಯೇ ಇದೆ. ಉತ್ತರ ಕರ್ನಾಟಕ ಭಾಗದಲ್ಲಿಯೇ ಇದು ಮೊದಲು ಅಂದ್ರೆ ಅತಿಶಯೋಕ್ತಿ ಆಗುವುದಿಲ್ಲ. ಅತ್ಯುತ್ತಮ ಸೇವೆ ಮತ್ತು ಕಡಿಮೆ ವೆಚ್ಚದಲ್ಲಿಯೇ ಚಿಕಿತ್ಸೆ ನೀಡುವುದೇ ಎಸ್.ಡಿ.ಎಂ.ನಾರಾಯಣ ಹಾರ್ಟ್ ಸೆಂಟರ್ ಪ್ರಮುಖ ಉದ್ದೇಶವಾಗಿದೆ.
ಎಸ್.ಡಿ.ಎಂ.ನಾರಾಯಣ ಹಾರ್ಟ್ ಸೆಂಟರ್‌ನ ವೈದ್ಯಾಧಿಕಾರಿ ಡಾ.ಕೀರ್ತಿ ತಮ್ಮ ಈ ಹೃದಯಾಲದಯ ಪ್ರಮುಖ ಉದ್ದೇಶಗಳನ್ನೂ ಇಲ್ಲಿ ಹೇಳಿಕೊಂಡಿದ್ದಾರೆ. ಉತ್ತಮ ಸೇವೆ-ಅತ್ಯುತ್ತಮ ಕೇರ್-ಕಡಿಮೆ ವೆಚ್ಚ-ಇದುವೆ ನಮ್ಮ ಉದ್ದೇಶ ಅಂತಲೇ ಹೇಳಿಕೊಂಡಿದ್ದಾರೆ. ಇಲ್ಲಿಯ ಸೇವೆಯ ಸದುಪಯೋಗ ಪಡಿಸಿಕೊಳ್ಳಿ ಅನ್ನೋದು ಇವರ ಮಾತಿ ಒಟ್ಟು ತಾತ್ಪರ್ಯ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/09/2022 04:16 pm