ಹುಬ್ಬಳ್ಳಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಜಯಂತಿ ಅಂಗವಾಗಿ, ಬೃಹತ್ ರಕ್ತದಾನ ಶಿಬಿರ ಆಗಸ್ಟ್ 7 ರಂದು ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಆಯೋಜಿಸಿದ್ದಾರೆ. ರಕ್ತದಾನ ಶಿಬಿರದ ಕುರಿತು ರಾಯಣ್ಣ ಅಭಿಮಾನಿ ಬಳಗದ ಪೂರ್ವಭಾವಿ ಸಭೆಯನ್ನು, ಹುಬ್ಬಳ್ಳಿಯ ಸರ್ಕಿಟ್ ಹೌಸ್‌ನಲ್ಲಿ ಮಾಡಲಾಗಿದ್ದು, ಸಭೆಯಲ್ಲಿ ರಾಯಣ್ಣ ಅಭಿಮಾನಿ ಬಳಗದ ಸದಸ್ಯರ ಅಭಿಪ್ರಾಯ ಸಲಹೆಗಳನ್ನು ಪಡೆಯಲಾಯಿತು.
ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಸುರೇಶ್ ಅವರು ಮಾತನಾಡಿ, ರಾಯಣ್ಣನವರ ಜಯಂತೋತ್ಸವದ ಪ್ರಯುಕ್ತ ಆಯೋಜಿಸಿದ ರಕ್ತದಾನ ಶಿಬಿರವನ್ನು ಇಡೀ ಉತ್ತರ ಕರ್ನಾಟಕವೆ ತಿರುಗಿ ನೋಡಬೇಕು.
ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ರಕ್ತ ದಾನಿಗಳನ್ನು ಒಗ್ಗೂಡಿಸಿ, ರಕ್ತದಾನವನ್ನು ಮಾಡಿಸೋಣ ಹಾಗೂ ಯುವ ಸಮೂಹದಲ್ಲಿ ರಕ್ತದಾನ ಮಾಡುವ ಬಗ್ಗೆ ಜಾಗೃತಿಯನ್ನು ಮೂಡಿಸೋಣ, ದುಶ್ಚಟದಿಂದ ಯುವ ಸಮುದಾಯವನ್ನು ಮುಕ್ತಿ ಗೊಳಿಸೋಣ ಹಾಗೂ ರಾಷ್ಟ್ರೋತ್ಪನ್ನ ರಕ್ತ ಭಂಡಾರ ಹುಬ್ಬಳ್ಳಿ ಹಾಗೂ ರೋಟರಿ ರಕ್ತ ಭಂಡಾರ ಇವರ ಸಂಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಯಶಸ್ವಿಗೊಳಿಸೋಣ ಎಂದು ಸಂಸ್ಥಾಪಕ ಅಧ್ಯಕ್ಷರಾದ ಸುರೇಶ್ ಗೋಕಾಕ್ ಅವರು ಈ ಸಂದರ್ಭದಲ್ಲಿ ಹೇಳಿದರು.
ಈ ಸಭೆಯಲ್ಲಿ ನೂರಾರು ರಾಯಣ್ಣ ಅಭಿಮಾನಿಗಳು ಭಾಗವಸಿದ್ದು, ಮುಂದಿನ ದಿನಗಳಲ್ಲಿ ರಕ್ತದಾನ ಶಿಬಿರಕ್ಕೆ ಸಿದ್ಧತೆ ಮಾಡಲು ಮುಂದಾದರು. ಆದಷ್ಟು ಅಭಿಮಾನಿಗಳು ಆಗಷ್ಟ್ 7 ರಂದು ಬಂದು ರಕ್ತದಾನ ಮಾಡಬೇಕಾಗಿ ಎಲ್ಲರು ವಿನಂತಿ ಮಾಡಿಕೊಂಡಿದ್ದಾರೆ.
Kshetra Samachara
30/07/2022 09:23 am