ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಕಿಟೆಲ್ ವಿಜ್ಞಾನ ಮಹಾ ವಿದ್ಯಾಲಯದಲ್ಲಿ ರಕ್ತದಾನ ಶಿಬಿರ

ನವಲಗುಂದ : ಧಾರವಾಡದ ಕಿಟೆಲ್ ವಿಜ್ಞಾನ ಮಹಾ ವಿದ್ಯಾಲಯದಲ್ಲಿ ಯುಥ್ ರೆಡ್ ಕ್ರಾಸ್ ಮತ್ತು ರಾಷ್ರೀಯ ಸೇವಾ ಯೋಜನೆಯ ಸಂಯೋಗದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಸುಮಾರು 30 ವಿಧ್ಯಾರ್ಥಿ/ವಿಧ್ಯಾರ್ಥಿನಿಯರು ಸ್ವಯಂ ಪ್ರೇರಿತರಾಗಿ ರಕ್ತದಾನವನ್ನು ಮಾಡುವ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದರು.

ಈ ವೇಳೆ ಮಾತನಾಡಿದ ಪ್ರಾಚಾರ್ಯರಾದ ಡಾ. ದಾರ್ಲಾ ಲಾಜರಸ್ ಅವರು, ರಕ್ತದಾನಿಗಳನ್ನು ಜೀವರಕ್ಷಕರು, ರಕ್ತದಾನ ಮಾಡುವ ಮೂಲಕ ಸಾಮಾಜಿಕ ಜವಬ್ಬಾರಿಯನ್ನು ನಿರ್ವಹಿಸುವ ಮೂಲಕ ಇನ್ನೊಬ್ಬರ ಬದುಕಿಗೆ ದಾರಿದಿಪವಾಗಬೇಕೆಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಶಿಬಿರದಲ್ಲಿ ಸರ್ಕಾರಿ ಆಸ್ಪತ್ರೆಯ ರಕ್ತಭಂಡಾರದ ವೈದ್ಯಾದಿಕಾರಿಗಳಾದ ಡಾ. ವಿನಿತಾ, ರಕ್ತಭಂಡಾರದ ಆಪ್ತ ಸಮಾಲೋಚಕರಾದ ಶ್ರೀಶೈಲ ಕಲಕುಟ್ರ, ಶುಶ್ರೂಷಾಧಿಕಾರಿಗಳು ದೀನಾ, ಡಿ. ಸುರೇಖಾ, ಪ್ರ. ಶಾ. ತಂತ್ರಜ್ಞ ಹನಮಂತ ಹೊಸಮನಿ, ಪ್ರಾದ್ಯಾಪಕರಾದ ಬಿ. ಕೆ. ಮೇಗಲಮನಿ, ಝೇವಿಯರ್ ಗಾಮಾ, ಕಾರ್ಯದರ್ಶಿ ಮಹೇಶ ಜಿರಲಬಾವಿ, ಸಹ ಕಾರ್ಯದರ್ಶಿ ವಿನಾಯಕ ಡಿ. ಬಿ, ಸೇರಿದಂತೆ ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.

Edited By : PublicNext Desk
Kshetra Samachara

Kshetra Samachara

13/07/2022 11:21 am

Cinque Terre

8.08 K

Cinque Terre

0

ಸಂಬಂಧಿತ ಸುದ್ದಿ