ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂತರಾಷ್ಟ್ರೀಯ ಮಟ್ಟದಲ್ಲಿ ಯೋಗ ಸಾಹಸ ಮಾಡಿದ ಹುಬ್ಬಳ್ಳಿಯ 65 ರ ವೃದ್ಧ

ಪಬ್ಲಿಕ್ ನೆಕ್ಸ್ಟ್ ವಿಶೇಷ- ಈರಣ್ಣ ವಾಲಿಕಾರ

ಹುಬ್ಬಳ್ಳಿ: ಯುವಕರನ್ನು ನಾಚಿಸುವಂತಹ ಯೋಗಾಭ್ಯಾಸ, ಸ್ಥಳೀಯ ಮಟ್ಟದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಅವರ ಸಾಧನೆ. ವಿಭಿನ್ನ ಯೋಗಾಭ್ಯಾಸ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಅಷ್ಟಕ್ಕೂ ಅವರ ಯೋಗ ಹೇಗಿದೆ ಅಂತ ತೋರಸ್ತೇವಿ ನೋಡಿ....

ಎಸ್,,,,, ಹೀಗೆ ವಿವಿಧ ಭಂಗಿಗಳನ್ನು ನೀರು ಕುಡಿದಂತೆ ಸಲಿಸಾಗಿ ಯೋಗ ಮಾಡಿತ್ತಿರುವ ಇವರು ಹುಬ್ಬಳ್ಳಿಯ ಸಿದ್ಧಾರೂಢ ಮಠದ ನಿವಾಸಿ ಪಂಚಲಿಂಗಪ್ಪ ಕವಲೂರ. ಅಂತರಾಷ್ಟ್ರೀಯ ಮಟ್ಟದಲ್ಲಿ ವಿಭಿನ್ನವಾಗಿ ಯೋಗ ಪ್ರದರ್ಶನ ಮಾಡುವ ಮೂಲಕ, ದೇಶದ ಕೀರ್ತಿ ಪತಾಕೆಯನ್ನು ಹಾರಿಸುವ ಕೆಲಸ ಮಾಡಿದ್ದಾರೆ.

ಇವರ ತಂದೆ ಸ್ವಾತಂತ್ರ್ಯ ಹೋರಾಟಗಾರರು, ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆದ ಇವರು ಯೋಗದಲ್ಲಿ ವಿಶಿಷ್ಟ ಸಾಧನೆಗೈದಿದ್ದಾರೆ.

ಚಿಕ್ಕವಯಸ್ಸಿನಲ್ಲೇ ಯೋಗಾಭ್ಯಾಸ ಮಾಡಿತ್ತಾ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿ ಪಡೆದಿದ್ದಾರೆ. 2022 ರಲ್ಲಿ ಸೌತ್ ಕೊರಿಯಾದಲ್ಲಿ ನಡೆದ 9 ನೇ ಏಷಿಯನ್ ಯೋಗ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ ನಲ್ಲಿ, ಮೂವತ್ತೈದು ವರ್ಷ ಮೇಲ್ಪಟ್ಟ ವಯೋಮಿತಿಯ ಯೋಗಾಸನ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ಅಷ್ಟೇ ಅಲ್ಲದೆ ಇವರಿಗೆ ಜಗದ್ಗುರು ರಂಭಾಪೂರಿ ಗುರುಗಳು ಯೋಗ ವಿಷರದ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಅದರಂತೆ ಇವರಿಗೆ ಕೋಲೊಂಬಿಯಾದ ಇಂಟರ್ನ್ಯಾಷನಲ್ ಗ್ಲೋಬಲ್ ಯುನಿವರ್ಸಿಟಿ ಡಾಕ್ಟರೇಟ್ ಪ್ರಶಸ್ತಿ ಸೇರಿದಂತೆ, ಹಲವಾರು ಪ್ರಶಸ್ತಿ ಇವರ ಯೋಗ ಸಾಧನಗೆ ಒಲಿದು ಬಂದವೆ. ಇದೀಗ ಲಕ್ಷಾಂತರ ಜನರಿಗೆ ಯೋಗ ತರಬೇತಿ ನೀಡಿರುವ ಇವರು ತಮ್ಮ ಜೀವನವನ್ನೇ ಯೋಗಕ್ಕೆ ಮಿಸಲಿಟ್ಡಿದ್ದು ನಿಜಕ್ಕೂ ಹೆಮ್ಮೆಯ ಸಂಗತಿ.

-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

07/07/2022 05:44 pm

Cinque Terre

79.82 K

Cinque Terre

1

ಸಂಬಂಧಿತ ಸುದ್ದಿ