ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಾಲನಟ ಲಕ್ಷ್ ಸ್ಯಾಮ್ ಹುಟ್ಟುಹಬ್ಬ ಸಂಭ್ರಮ; ರಕ್ತದಾನ ಶಿಬಿರ, ನೂರಾರು ಯುವಕರು ಭಾಗಿ

ಹುಬ್ಬಳ್ಳಿ: ಸಾಮಾಜಿಕ ಜಾಲತಾಣಗಳ ಮೂಲಕ ಹುಬ್ಬಳ್ಳಿ- ಧಾರವಾಡ ಸೇರಿದಂತೆ ರಾಜ್ಯಾದ್ಯಂತ ಖ್ಯಾತಿ ಗಳಿಸಿರುವ ಹುಬ್ಬಳ್ಳಿಯ ಬಾಲನಟ ಲಕ್ಷ್ ಸ್ಯಾಮ್ ಹುಟ್ಟುಹಬ್ಬವನ್ನು ಕುಟುಂಬಸ್ಥರು ಹಾಗೂ ಯುವಕರು ಸೇರಿ ರಕ್ತದಾನ ಮಾಡುವ ಮೂಲಕ ವಿಶಿಷ್ಟವಾಗಿ ಆಚರಿಸಿದರು.

ಇಂದು ನಗರದ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದ ಮುಂಭಾಗದಲ್ಲಿ ಇರುವ ಯಾತ್ರಿ ಹೋಟೆಲ್ ನಲ್ಲಿ ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತನಿಧಿ ಸಂಸ್ಥೆ ಸಹಯೋಗದೊಂದಿಗೆ ಶಂಕರ ದೊಡ್ಡಮನಿ- ಶಿಲ್ಪಾ ದೊಡ್ಡಮನಿ ದಂಪತಿ ಸೇರಿದಂತೆ ನೂರಾರು ಯುವಕರು ಸೇರಿ ರಕ್ತದಾನ ಮಾಡುವ ಮೂಲಕ ಹುಟ್ಟುಹಬ್ಬದ ಸಾರ್ಥಕತೆ ಮೆರೆದರು.

ಈ ವಿಶೇಷ ರಕ್ತದಾನ ಶಿಬಿರದಲ್ಲಿ 100ಕ್ಕೂ ಹೆಚ್ಚು ಮಂದಿ ರಕ್ತ ನೀಡಿದರು. ಲಕ್ಷ್ ತಂದೆ ಶಂಕ್ರಣ್ಣ ದೊಡ್ಡಮನಿ, ತಾಯಿ ಶಿಲ್ಪಾ ದೊಡ್ಡಮನಿ, ಚಿಕ್ಕಪ್ಪ ಮಂಜುನಾಥ ಶಾಬಾದ್, ಸತೀಶ ಛಲವಾದಿ, ಪ್ರಕಾಶ ಕಲಗುಪ್ಪಿ, ಸಂಜು ಪಠದಾರಿ, ಶ್ರೀನಾಥ್, ಷರೀಫ್, ಚಾಂದ್ ನದಾಫ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

03/07/2022 04:09 pm

Cinque Terre

110.49 K

Cinque Terre

0

ಸಂಬಂಧಿತ ಸುದ್ದಿ