ಧಾರವಾಡ: ವಿಶ್ವ ಯೋಗ ದಿನದ ಅಂಗವಾಗಿ ಧಾರವಾಡದ ಅನೇಕ ಕಡೆಗಳಲ್ಲಿ ಯೋಗ ಶಿಬಿರ ನಡೆಸಲಾಯಿತು.
ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲೂ ಯೋಗ ದಿನವನ್ನು ಆಚರಣೆ ಮಾಡಲಾಯಿತು. ಪ್ರಭಾರ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶೆ ಎಸ್.ನಾಗಶ್ರೀ ಅವರು ಯೋಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕೇಂದ್ರ ಆಯುಷ್ ಇಲಾಖೆಯ ನಿರ್ದೇಶನಗಳನ್ವಯ ಯೋಗ ಅಭ್ಯಾಸ ಮಾಡಲಾಯಿತು. ನ್ಯಾಯವಾದಿ ಹಾಗೂ ಯೋಗ ಶಿಕ್ಷಕ ಸಂಜಯಕುಮಾರ ಹಡಗಲಿ ಅವರು ಯೋಗ ಶಿಬಿರ ನಡೆಸಿದರು.
ಇತ್ತ ಕೊಪ್ಪದಕೇರಿಯಲ್ಲಿ ಶಾಸಕ ಅಮೃತ ದೇಸಾಯಿ ಕೂಡ ಯೋಗ ಶಿಬಿರದಲ್ಲಿ ಪಾಲ್ಗೊಂಡು ಯೋಗಾಸನ ಮಾಡಿದರು. ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರು ಕೂಡ ಪಾಲ್ಗೊಂಡು ಯೋಗಾಸನ ಮಾಡಿದರು.
ಇನ್ನು ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಎಸ್ಜಿವಿ ಹೈಸ್ಕೂಲ್ ಮೈದಾನದಲ್ಲಿ ಶಾಲಾ ಮಕ್ಕಳಿಗಾಗಿ ಯೋಗ ಶಿಬಿರ ನಡೆಸಲಾಯಿತು. ವಿವಿಧ ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಗಾಸನ ಮಾಡಿದರು.
Kshetra Samachara
21/06/2022 11:09 am