ಕುಂದಗೋಳ: ಆಧುನಿಕತೆಯ ನಡುವೆ ಕಳೆದುಕೊಂಡು ಹುಡುಕುತ್ತಿರುವ ಭಾರತೀಯ ಪ್ರಾಚೀನ ಕಲೆ ಯೋಗದಲ್ಲಿ ಇಲ್ಲೊಬ್ಬ ಯುವಕ ರಾಜ್ಯಮಟ್ಟದಲ್ಲಿ ಹೆಸರು ಮಾಡಿ ರಾಷ್ಟ್ರೀಯ ಮಟ್ಟದ ಅವಕಾಶಕ್ಕೆ ಕಾಯುತ್ತಿದ್ದಾನೆ.
ಹೌದು ! ಈತನ ಹೆಸರು ರಾಕೇಶ್ ರಮೇಶ್ ಗೊಂದೆನ್ನವರ. ಕುಂದಗೋಳ ತಾಲೂಕಿನ ರೈತಾಪಿ ಕುಟುಂಬದ ಈ ಕುಡಿ, ಯೋಗದಲ್ಲಿ ತಾನು ಪ್ರತಿನಿಧಿಸಿದ ಎಲ್ಲಾ ಸ್ಪರ್ಧೆಗಳಲ್ಲಿ ತನ್ನದೇ ಛಾಪು ಮೂಡಿಸಿ ಪ್ರಶಸ್ತಿ ಪತ್ರ ಬಾಚಿಕೊಂಡಿದ್ದಾನೆ.
ರಾಯಚೂರಿನ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ, ಕುಂದಗೋಳ ಹರಭಟ್ಟದ ಸ್ಪರ್ಧೆಯಲ್ಲಿ ಪ್ರಥಮ, ನೂಲ್ವಿಯಲ್ಲಿ ದ್ವೀತಿಯ, ಧಾರವಾಡದಲ್ಲಿ ತೃತೀಯ, ಬೆಂಗಳೂರು ರಾಮನಗರದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚತುರ್ಥ ಸೇರಿ, ಶಿರಸಿಯಲ್ಲಿ ನಡೆದ ಯೋಗಾ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಅತ್ಯುತ್ತಮ ಯೋಗಪಟವಾಗಿ ಹೊರಹೊಮ್ಮಿದ್ದಾನೆ.
ಯೋಗದ ಪ್ರತಿ ಕ್ಲಿಷ್ಟಕರ ಆಸನಗಳನ್ನು ಲೀಲಾಜಾಲವಾಗಿ ಮಾಡುವ ಈತ ಕುಂದಗೋಳದ ಜಿ.ಎಸ್.ಪಾಟೀಲ್ ಕಲಾ ವಿಭಾಗದಲ್ಲಿ ಎರಡನೇ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದು ಯುವಕನ ಕಲೆಗೆ ಶಿಕ್ಷಕರು ಪ್ರೋತ್ಸಾಹ ತುಂಬಿದ್ದಾರೆ.
ಒಟ್ಟಾರೆ ಯೋಗದ ಕಲೆಯ ಮೂಲಕವೇ ಪ್ರಶಸ್ತಿ, ಪ್ರಶಂಸನಾ ಪತ್ರ, ಜನ ಮೆಚ್ಚುಗೆ, ವೇದಿಕೆ ಚಪ್ಪಾಳೆ ಗಳಿಸಿರುವ ಈ ಕುವರನಿಗೆ ಹೆಚ್ಚಿನ ಸಹಕಾರದ ಅಗತ್ಯವಿದೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
Kshetra Samachara
20/06/2022 10:12 pm