ಧಾರವಾಡ: ವಿಶ್ವ ತಂಬಾಕು ರಹಿತ ದಿನಾಚರಣೆ ಮೇ 31ರ ಅಂಗವಾಗಿ ಇಂದು ಧಾರವಾಡ ಹೊರವಲಯದ ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ CLEEN GREEN ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿ ಹಾಗೂ ಸಿಬ್ಬಂದಿ ದೇವಸ್ಥಾನದ ಸುತ್ತಮುತ್ತಲೂ ಎಲ್ಲೆಂದರಲ್ಲಿ ಬಿದ್ದಿರುವ ತಂಬಾಕು ಗುಟಖಾ ಚೀಟಿ, ಸಿಗರೇಟು ಪ್ಯಾಕ್‌ಗಳನ್ನು ಸ್ವಚ್ಛಗೊಳಿಸಿದರು.
ಧಾರವಾಡ ಹೊರವಲಯದ ನುಗ್ಗಿಕೇರಿ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಸುತ್ತಲೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿ ಸಿಬ್ಬಂದಿ ಸೇರಿಕೊಂಡು ಸಂಪೂರ್ಣ ಸ್ವಚ್ಛತೆ ನಡೆಸಿದ್ದಾರೆ. ತಂಬಾಕು ಇರುವ ಬೀಡಿ, ಸಿಗರೇಟ್ ಗುಟಖಾಗಳು ಜೀವಕ್ಕೆ ಮಾರಕವಾಗಿವೆ. ಇವುಗಳಿಂದ ಎಲ್ಲರೂ ದೂರ ಇರಬೇಕು ಎಂದು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದರು. ಅಲ್ಲದೆ ತಂಬಾಕು ಮುಕ್ತ ಧಾರವಾಡಕ್ಕೆ ಎಲ್ಲರೂ ಕೈ ಜೋಡಿಸಿ ಎಂದು ಜಾಥಾ ಮಾಡಿದರು.
Kshetra Samachara
23/05/2022 02:23 pm