ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ರಕ್ತದಾನದ ಮೂಲಕ ಆರ್ಟ್ ಆಫ್ ಲಿವಿಂಗ್ ರವಿಶಂಕರ್ ಗುರೂಜಿ ಜನ್ಮದಿನ ಆಚರಣೆ

ಹುಬ್ಬಳ್ಳಿ: ಕೋವಿಡ್ ಪರಿಸ್ಥಿತಿ ಉಲ್ಬಣಗೊಂಡಿರುವ ಸಂದರ್ಭದಲ್ಲಿ ರಕ್ತದ ಕೊರತೆ ತೀವ್ರ ಪ್ರಮಾಣದಲ್ಲಿ ಎದುರಾಗಿತ್ತು. ಈಗ ಸ್ವಲ್ಪ ಪ್ರಮಾಣದಲ್ಲಿ ಚೇತರಿಕೆ ಕಂಡಿದೆ. ಈ ನಿಟ್ಟಿನಲ್ಲಿ ರಕ್ತದ ಸಮಸ್ಯೆಗೆ ಬ್ರೇಕ್ ಹಾಕುವ ಸದುದ್ದೇಶದಿಂದ ಹುಬ್ಬಳ್ಳಿಯಲ್ಲಿ ಆರ್ಟ್ ಆಫ್ ಲಿವಿಂಗ್ ನ ರವಿಶಂಕರ ಗುರೂಜಿಯವರ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರದ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.

ವಿಶ್ವ ಶಾಂತಿಯ ಮುಖ್ಯಸ್ಥರಾದ ರವಿಶಂಕರ್ ಗುರೂಜಿಯವರ ಜನ್ಮದಿನದ ಅಂಗವಾಗಿ ಸುಮಾರು ಅರವತ್ತಕ್ಕೂ ಹೆಚ್ಚು ಜನರು ರಕ್ತದಾನ ಮಾಡುವ ಮೂಲಕ ಜನ್ಮದಿನದ ಆಚರಣೆಗೆ ಹೊಸ ಮೆರಗನ್ನು ನೀಡಿದರು. ವಿಶ್ವದಲ್ಲಿ ಶಾಂತಿ ಸೌಹಾರ್ದತೆಯ ಮಂತ್ರವನ್ನು ಬೋಧಿಸಿದ ರವಿಶಂಕರ್ ಗುರೂಜಿಯವರ ಜನ್ಮದಿನದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಾಯಿತು.

ಹುಬ್ಬಳ್ಳಿಯ ಶಬರಿನಗರದಲ್ಲಿ ಬೆಳಿಗ್ಗೆಯಿಂದಲೇ ರವಿಶಂಕರ್ ಗುರೂಜಿಯವರ ಭಕ್ತರು ಹಾಗೂ ಅಭಿಮಾನಿ ಬಳಗ ರವಿಶಂಕರ್ ಗುರೂಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.

ಒಟ್ಟಿನಲ್ಲಿ ಹುಬ್ಬಳ್ಳಿಯಲ್ಲಿ ಇಂತಹದೊಂದು ಮಹತ್ವದ ಕಾರ್ಯಕ್ರಮ ಸಾಮಾಜಿಕ ಸಂದೇಶಕ್ಕೆ ಸಾಕ್ಷಿಯಾಗಿದ್ದು, ಇನ್ನಷ್ಟು ಮಹತ್ವದ ಕಾರ್ಯಗಳು ನಡೆಯಲಿ ಎಂಬುವುದು ನಮ್ಮ ಆಶಯ.

Edited By : Manjunath H D
Kshetra Samachara

Kshetra Samachara

13/05/2022 04:48 pm

Cinque Terre

34.99 K

Cinque Terre

0

ಸಂಬಂಧಿತ ಸುದ್ದಿ