ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಸುಚಿರಾಯು ಆಸ್ಪತ್ರೆಯ ವೈದ್ಯರ ತಂಡ ಕೊನೆಯ ಹಂತದ ಲಿವರ್ ಸಿರೋಸಿಸ್ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಗೆ ಟಿಐಪಿಎಸ್ಎಸ್ ಯಶಸ್ವಿ ಶಸ್ತ್ರಚಿಕಿತ್ಸೆ ನೀಡುವ ಮೂಲಕ ರೋಗಿಗೆ ಮರುಜೀವ ನೀಡಿ ಸಾಧನೆ ಮಾಡಿದೆ.
ಹುಬ್ಬಳ್ಳಿಯಲ್ಲಿ ಅರವತ್ತು ವರ್ಷದ ವ್ಯಕ್ತಿಯೊಬ್ಬರು ಬಹುದಿನಗಳಿಂದ ಲಿವರ್ ಸಿರೋಸಿಸ್ ದಿಂದ ಬಳಲುತ್ತಿದ್ದರು. ಅಲ್ಲದೇ ರೋಗಿಯ ಹೊಟ್ಟೆಯಲ್ಲಿ ಪದೇ ಪದೇ ನೀರು ತುಂಬಿಕೊಳ್ಳುತ್ತಿತ್ತು. ಇದರಿಂದ ರೋಗಿ ನಿತ್ಯದ ಕೆಲಸಗಳನ್ನು ಮಾಡಿಕೊಳ್ಳಲು ಕಷ್ಟವಾಗುತ್ತಿತ್ತು.
ರೋಗಿಯ ದೇಹಸ್ಥಿತಿ ಯಾವುದೇ ರೀತಿಯ ವೈದ್ಯಕೀಯ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಹೀಗಾಗಿ ಲಿವರ್ ಕಸಿ ಮಾಡುವುದೇ ಅಂತಿಮ ಚಿಕಿತ್ಸೆಯಾಗಿತ್ತು. ಆದರೆ ರೋಗಿಯ ಆರೋಗ್ಯ ಸ್ಪಂದಿಸದ ಕಾರಣ ಕಸಿ ಮಾಡುವುದು ಸಾಧ್ಯವಾಗಿರಲಿಲ್ಲ. ಇದನ್ನು ಸವಾಲಾಗಿ ಸ್ವೀಕಾರ ಮಾಡಿದ ಸುಚಿರಾಯು ಆಸ್ಪತ್ರೆಯ ಡಾ.ವೆಂಕಟೇಶ ಹೆಚ್.ಎ ವೈದ್ಯರ ತಂಡ ಪರ್ಯಾಯವಾಗಿ ಟಿಐಪಿಎಸ್ ಎಸ್ ಚಿಕಿತ್ಸೆ ನಡೆಸಲು ತೀರ್ಮಾನಿಸಿ ಕಳೆದ ವಾರ ಯಶಸ್ವಿ ಚಿಕಿತ್ಸೆ ನಡೆಸಿದೆ.
ಶಸ್ತ್ರರಹಿತ ಪಿನ್ ಹೋಲ್ ಮೂಲಕ ಲೋಕಲ್ ಅನಸ್ತೇಶಿಯಾ ನೀಡಿ ರೋಗಿಗೆ ಯಾವುದೇ ತೊಂದರೆಯಾಗದಂತೆ ಚಿಕಿತ್ಸೆ ನೀಡಲಾಗಿದೆ ಎಂದು ಡಾ.ವೆಂಕಟೇಶ ತಿಳಿಸಿದರು. ಮಾತ್ರವಲ್ಲದೆ ಉತ್ತರ ಕರ್ನಾಟಕದ ಭಾಗದಲ್ಲಿಯೇ ಮೊದಲ ಯಶಸ್ವಿ ಶಸ್ತ್ರಚಿಕಿತ್ಸೆಯಾಗಿದೆ ಎಂದರು.
ಒಟ್ಟಿನಲ್ಲಿ ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಯ ವೈದ್ಯರ ತಂಡ ಇಂತಹದೊಂದು ಮಹತ್ವದ ಕಾರ್ಯದ ಮೂಲಕ ವ್ಯಕ್ತಿಯೊಬ್ಬರ ಜೀವಕ್ಕೆ ಮರುಜೀವ ನೀಡಿರುವುದು ನಿಜಕ್ಕೂ ವಿಶೇಷವಾಗಿದೆ.
ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
13/05/2022 04:05 pm