ಕುಂದಗೋಳ : ಆರೋಗ್ಯಕ್ಕೆ ಸಂಬಂಧಿಸಿದ ನೂರೊಂದು ಜಾಗೃತಿ ಸಂದೇಶಗಳು, ಎಲ್ಲೆಡೆ ವೈದ್ಯಕೀಯ ಸೇವಾ ಕೇಂದ್ರಗಳು ಮತ್ತು ಸೇವೆ, ತಮ್ಮ ಆರೋಗ್ಯ ರಕ್ಷಣೆಗಾಗಿ ತಾಲೂಕು ಆಸ್ಪತ್ರೆ ಎಡೆಗೆ ಆಗಮಿಸಿದ ಜನತೆ, ಹೌದು. ಇದು ಆರೋಗ್ಯ ಮೇಳ ಕಾರ್ಯಕ್ರಮದಲ್ಲಿ ಕಂಡು ಬಂದ ನೋಟ.
ತಾಲೂಕ ಆಸ್ಪತ್ರೆ ಆವರಣದಲ್ಲಿ ನಡೆದ ಆರೋಗ್ಯ ಮೇಳದಲ್ಲಿ ನುರಿತ ವೈದ್ಯರಿಂದ ಜನತೆಗೆ ಸಲಹೆ ಚಿಕಿತ್ಸೆ ನಡೆದವು. ಕಾರ್ಯಕ್ರಮವನ್ನು ಸಸಿಗೆ ನಿರೇರೆದು, ಕಲಾ ತಂಡಗಳಿಂದ ನಾಡಗೀತೆ ಹಾಡಿ, ಗಣ್ಯರ ಸಮ್ಮುಖದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಸಿ.ಕರಿಗೌಡರ ಉದ್ಘಾಟಿಸಿದರು.
ಅತಿ ಅಚ್ಚುಕಟ್ಟಾಗಿ ಆಯೋಜನೆಗೊಂಡ ಕಾರ್ಯಕ್ರಮ ನಿಗದಿತ ಸಮಯ 9 ಗಂಟೆಗೆ ಬದಲಾಗಿ 12 ಗಂಟೆಗೆ ಆರಂಭ ಕಂಡರೇ, ಕೋವಿಡ್ ನಾಲ್ಕನೇ ಅಲೆ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ಮತ್ತೆ ಮಾಸ್ಕ್ ಕಡ್ಡಾಯ ಮಾಡಿದ್ರೂ ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಅಷ್ಟೇ ಯಾಕೆ ? ವೇದಿಕೆ ಮೇಲೆ ಕೂತ ಗಣ್ಯರೇ ಮಾಸ್ಕ್ ಮರೆತಿದ್ದರು.
ಬಳಿಕ ವೇದಿಕೆ ಉದ್ದೇಶಿಸಿ ಮಾತನಾಡಿದ ತಹಶೀಲ್ದಾರ ಅಶೋಕ್ ಶಿಗ್ಗಾಂವಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಕೋವಿಡ್ ನಾಲ್ಕನೇ ಮುಂಜಾಗ್ರತೆ ಪಾಠ ಮಾಡುವ ಮುನ್ನ, ವೇದಿಕೆಯಲ್ಲಿ ಮಾಸ್ಕ್ ಪಡೆದು ಧರಿಸಿ ಬಂದಿದ್ದು ಕುಹಕ ಎನಿಸಿತು.
ವೃದ್ಧಯರಿಗೆ ಉಚಿತ ಆರೋಗ್ಯ ಚಿಕಿತ್ಸೆಗಾಗಿ ಆರೋಗ್ಯ ಕಾರ್ಡ್ ಅನ್ನ ವೇದಿಕೆ ಮೇಲೆ ಗಣ್ಯರು ವಿತರಣೆ ಮಾಡಿದರು. ಈ ವೇಳೆ ಗ್ರಾಮ್ ಒನ್ ಸೇವೆಯ ಅರಿವನ್ನು ಮಾಸ್ಕ್ ಧರಿಸದೇ ಸಿಬ್ಬಂದಿಗಳು ಮೂಡಿಸಿದರು. ತಾಲೂಕು ಮಟ್ಟದ ಆರೋಗ್ಯ ಮೇಳ, ಪ್ರಚಾರ ಕೊರತೆ ಕಾರಣ ಅತಿ ಕಡಿಮೆ ಜನತೆಗೆ ಸಂತೃಪ್ತಿ ಪಟ್ಟಿತು.
Kshetra Samachara
28/04/2022 06:46 pm